ಬುಧವಾರ, ಸೆಪ್ಟೆಂಬರ್ 22, 2021
23 °C

Tokyo Olympics | ಭಾರತದ ಆರ್ಚರಿ ಪುರುಷರ ತಂಡ ಕ್ವಾರ್ಟರ್‌ಗೆ ಲಗ್ಗೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಆರ್ಚರಿ ಪುರುಷರ ತಂಡ ವಿಭಾಗದಲ್ಲಿ ಭಾರತ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.

ಪುರುಷರ ತಂಡದ ಎಲಿಮಿನೇಷನ್ಸ್‌ನಲ್ಲಿ ಪ್ರವೀಣ್ ಜಾಧವ್, ಅತನು ದಾಸ್ ಮತ್ತು ತರುಣದೀಪ್ ರಾಯ್ ಅವರನ್ನೊಳಗೊಂಡ ಭಾರತ ತಂಡ ಕಜಕಿಸ್ತಾನ ವಿರುದ್ಧ 6-2ರಿಂದ ಗೆದ್ದು ಅಂತಿಮ ಎಂಟರ ಹಂತವನ್ನು ಪ್ರವೇಶಿಸಿದೆ.

ಇದನ್ನೂ ಓದಿ: 

ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ಕೊರಿಯಾ ವಿರುದ್ಧ ಸ್ಪರ್ಧಿಸಲಿದ್ದು, ಕಠಿಣ ಸವಾಲು ಎದುರಾಗಲಿದೆ. ಈ ಸ್ಪರ್ಧೆಯು ಭಾರತೀಯ ಕಾಲಮಾನ ಇಂದು ಬೆಳಗ್ಗೆ 10.15ಕ್ಕೆ ನಡೆಯಲಿದೆ.

 

 

 

ಕಜಕಿಸ್ತಾನದ ವಿರುದ್ಧ ಅತನು ದಾಸ್ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅಲ್ಲದೆ ಆರು ಬಾರಿ 'ಫರ್ಫೆಕ್ಟ್ 10'ಗೆ ಗುರಿಯಿಟ್ಟರು.

 

ಶನಿವಾರದಂದು ಆರ್ಚರಿ ಮಿಶ್ರ ರಿಕರ್ವ್ ವಿಭಾಗದಲ್ಲಿ ಪ್ರವೀಣ್ ಕುಮಾರ್ ಹಾಗೂ ದೀಪಿಕಾ ಕುಮಾರಿ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು