ಮಂಗಳವಾರ, ಸೆಪ್ಟೆಂಬರ್ 28, 2021
21 °C

Tokyo Olympics: ಗಾಲ್ಫ್‌- ಅನಿರ್ಬನ್ ಹಾದಿ ದುರ್ಗಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಅಂತಿಮ ಹಂತದಲ್ಲಿ ಪುಟಿದೆದ್ದ ಭಾರತದ ಅನಿರ್ಬನ್ ಲಾಹಿರಿ ಒಲಿಂಪಿಕ್ಸ್ ಗಾಲ್ಫ್‌ನ ಮೂರನೇ ಸುತ್ತಿನಲ್ಲಿ ಗಮನಾರ್ಹ ಸಾಧನೆ ಮಾಡಿದರು. ಆದರೆ ಪದಕ ಗಳಿಕೆಯ ಕನಸು ಸಾಕಾರಗೊಳ್ಳಬೇಕಾದರೆ ಮುಂದಿನ ಸುತ್ತುಗಳಲ್ಲಿ ಕಠಿಣ ಶ್ರಮ ಹಾಕಬೇಕಾಗಿದೆ.

ಶನಿವಾರ ಬೆಳಿಗ್ಗೆ ಎರಡನೇ ಸುತ್ತನ್ನು ಪೂರ್ಣಗೊಳಿಸಿದ ಅವರು 24ನೇ ಸ್ಥಾನ ಹಂಚಿಕೊಂಡರು. ನಂತರ ಮೂರನೇ ಸುತ್ತಿನಲ್ಲಿ 28ನೇ ಸ್ಥಾನದಲ್ಲಿ ಉಳಿದರು. ಉದಯನ್ ಮಾನೆ 55ನೇ ಸ್ಥಾನ ಹಂಚಿಕೊಂಡರು.

ಆತಿಥೇಯ ಜಪಾನ್‌ ಪದಕದತ್ತ ಹೆಜ್ಜೆ ಹಾಕಿದೆ. ಆ ದೇಶದ ಹಿಡೆಕಿ ಮತ್ಸುಯಾಮ ಎರಡನೇ ಸ್ಥಾನದಲ್ಲಿದ್ದು ಅಮರಿಕದ ಶಫೆಲಿ ಜಾಂಡರ್ ಅಗ್ರಸ್ಥಾನದಲ್ಲಿದ್ದಾರೆ. ಬ್ರಿಟನ್‌ನ ಕ್ಯಾಸಿ ಪೌಲ್ ಮತ್ತು ಮೆಕ್ಸಿಕೊದ ಒರ್ಟಿಸ್ ಕಾರ್ಲೋಸ್ ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು