ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ಕೆಲವು ಅಥ್ಲೀಟ್ಗಳು ಒಟ್ಟು ಸೇರಿ ಮದ್ಯಪಾನ ಮಾಡಿರುವುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಟೋಕಿಯೊ ಒಲಿಂಪಿಕ್ಸ್ ಆಯೋಜಕರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಕ್ರೀಡಾಪಟುಗಳು ಕ್ರೀಡಾಗ್ರಾಮದ ಉದ್ಯಾನವನದಲ್ಲಿ ಮದ್ಯಪಾನ ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿರುವುದಾಗಿ ಟೋಕಿಯೊ ಒಲಿಂಪಿಕ್ಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ತೊಷಿರೊ ಮುಟೊ ಹೇಳಿದ್ದಾರೆ.

ಇದನ್ನೂ ಓದಿ:Tokyo Olympics | ಏಳು ಪದಕಕ್ಕೆ ಕೊರಳೊಡ್ಡಿದ ಎಮ್ಮಾ ಮೆಕಿಯನ್ ವಿಶ್ವ ದಾಖಲೆ

'ನಾವು ಈ ಘಟನೆಯ ಬಗ್ಗೆ ಪರಿಶೀಲಿಸುತ್ತಿದ್ದೇವೆ. ತನಿಖೆಯ ಆಧಾರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇವೆ. ಪೊಲೀಸರು ಕೂಡಾ ಸ್ಥಳದಲ್ಲಿದ್ದರು. ಅವರು ಏನು ಕ್ರಮ ಕೈಗೊಂಡಿದ್ದಾರೆ ಎಂಬುದು ತಿಳಿದು ಬಂದಿಲ್ಲ' ಎಂದು ವಿವರಿಸಿದ್ದಾರೆ.

ಹಾಗಿದ್ದರೂ ಅಥ್ಲೀಟ್ಗಳ ರಾಷ್ಟ್ರೀಯತೆ ಹಾಗೂ ಹೆಸರಿನ ವಿವರ ನೀಡಲು ಮುಟೊ ನಿರಾಕರಿಸಿದರು.

ಕೋವಿಡ್-19 ಮುನ್ನೆಚ್ಚರಿಕಾ ಕ್ರಮವಾಗಿ ಕ್ರೀಡಾಪಟುಗಳು ಬಯಸಿದ್ದಲ್ಲಿ ಕೊಠಡಿಯಲ್ಲಿ ಏಕಾಂಗಿಯಾಗಿ ಮದ್ಯಪಾನ ಮಾಡಲು ಅನುಮತಿ ನೀಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಜೀವ ಸುರಕ್ಷಾ ವಲಯದಲ್ಲಿ ಟೋಕಿಯೊ ಒಲಿಂಪಿಕ್ಸ್ ಆಯೋಜಿಸಲಾಗುತ್ತದೆ. ಕ್ರೀಡಾಂಗಣಗಳಿಗೆ ಪ್ರೇಕ್ಷಕರಿಗೆ ಪ್ರವೇಶವಿಲ್ಲ. ಕ್ರೀಡಾಪಟುಗಳು ನಿಯಮಿತ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.