ಮಂಗಳವಾರ, ಸೆಪ್ಟೆಂಬರ್ 21, 2021
21 °C

Tokyo Olympics | ಟಿಟಿಯಲ್ಲಿ ಶರತ್ ಕಮಲ್ 3ನೇ ಸುತ್ತಿಗೆ ಲಗ್ಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಟೋಕಿಯೊ: ಭಾರತದ ಭರವಸೆಯಾಗಿರುವ ಅನುಭವಿ ಟೇಬಲ್ ಟೆನಿಸ್ ಪಟು ಶರತ್ ಕಮಲ್, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಸೋಮವಾರ ನಡೆದ ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಹೋರಾಟದಲ್ಲಿ ಪೋರ್ಚುಗಲ್‌ನ ಟಿಯಾಗೊ ಪೊಲೊನಿಯಾ ವಿರುದ್ಧ 2-11 11-8 11-5 9-11 11-6 11-9ರಿಂದ ಗೆಲುವು ಸಾಧಿಸಿದರು.

ಇದನ್ನೂ ಓದಿ: 

ಮೊದಲ ಗೇಮ್‌‍ನಲ್ಲಿ ಹಿನ್ನಡೆ ಅನುಭವಿಸಿದ 39 ವರ್ಷದ ಶರತ್, ಬಳಿಕ ತಮ್ಮ ಲಯ ಕಂಡುಕೊಂಡು ಎದುರಾಳಿ ಮೇಲೆ ಪ್ರಾಬಲ್ಯ ಮೆರೆಯುವಲ್ಲಿ ಯಶಸ್ವಿಯಾದರು. 49 ನಿಮಿಷಗಳ ಹೋರಾಟದ ಅಂತ್ಯದಲ್ಲಿ ಪಂದ್ಯ ವಶಪಡಿಸಿಕೊಂಡರು.

 

 

 

ಇದೀಗ ನಡೆಯಲಿರುವ ಮೂರನೇ ಸುತ್ತಿನ ಹೋರಾಟದಲ್ಲಿ ಶರತ್ ಅವರು ರಿಯೋ ಒಲಿಂಪಿಕ್ಸ್ ಚಾಂಪಿಯನ್ ಮಾ ಲಾಂಗ್ ಸವಾಲನ್ನು ಎದುರಿಸಲಿದ್ದಾರೆ. ಈ ಮೂಲಕ ಕಠಿಣ ಸವಾಲು ಎದುರಾಗಿದೆ.

 

ಇದೇ ವಿಭಾಗದಲ್ಲಿ ಭಾನುವಾರ ಸ್ಪರ್ಧಿಸಿದ್ದ ಜಿ. ಸತ್ಯನ್ ಸೋಲಿಗೆ ಶರಣಾಗಿ ಹೊರಬಿದ್ದಿದ್ದರು. ಮಹಿಳೆಯರ ವಿಭಾಗದಲ್ಲಿ ಮಣಿಕಾ ಬಾತ್ರಾ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು