ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ ಪ್ರೇಕ್ಷಕರಿಗೆ ಒಲಿಂಪಿಕ್ಸ್ ಟಿಕೆಟ್‌ ಹಣ ಮರುಪಾವತಿ

Last Updated 30 ಅಕ್ಟೋಬರ್ 2020, 12:43 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್ ಟಿಕೆಟ್‌ ಖರೀದಿಸಿರುವ ಜಪಾನ್ ಅಭಿಮಾನಿಗಳಿಗೆ ಹಣ ಮರುಪಾವತಿ ಮಾಡಲಾಗುವುದು ಎಂದು ಕೂಟದ ಸ್ಥಳೀಯ ಸಂಘಟನಾ ಸಮಿತಿ ಶುಕ್ರವಾರ ಖಚಿತಪಡಿಸಿದೆ. ರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯಿಂದ ಟಿಕೆಟ್‌ ಖರೀದಿಸಿರುವ ಬೇರೆ ದೇಶದ ಅಭಿಮಾನಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದೂ ಸಮಿತಿ ಹೇಳಿದೆ.

ಈ ವರ್ಷ ಟೋಕಿಯೊದಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ಅನ್ನು ಕೋವಿಡ್‌–19 ಪಿಡುಗಿನ ಹಾವಳಿಯ ಹಿನ್ನೆಲೆಯಲ್ಲಿ 2021ಕ್ಕೆ ಮುಂದೂಡಲಾಗಿದೆ. ಹಣ ಮರುಪಾವತಿಗಾಗಿ ನಿಯಮಗಳನ್ನು ನಿಗದಿಪಡಿಸಲಾಗಿದೆ.

ಈಗ ಕೊಂಡುಕೊಂಡಿರುವ ಟಿಕೆಟ್‌ಗಳನ್ನು ಮುಂದಿನ ವರ್ಷಕ್ಕೆ ಬಳಸಲು ಸಾಧ್ಯವಿಲ್ಲ ಎಂದು ತಿಳಿದಿರುವ ಜಪಾನ್‌ನ ಅಭಿಮಾನಿಗಳು ನವೆಂಬರ್ 10-30ರ ಅವಧಿಯಲ್ಲಿ ಮರುಪಾವತಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ತಮ್ಮ ಹಣವನ್ನು ಮರಳಿ ಪಡೆಯಬಹುದು. ಪ್ಯಾರಾಲಿಂಪಿಕ್ಸ್ ಟಿಕೆಟ್‌ ಹಣ ಮರಳಿ ಪಡೆಯಲು ಅವಧಿ ಡಿಸೆಂಬರ್ 1-21.

2021ರ ಜುಲೈ 23ರಂದು ಒಲಿಂಪಿಕ್‌ ಕೂಟ ಆರಂಭಿಸುವ ಉದ್ದೇಶವನ್ನು ಸಂಘಟಕರು ಹಾಗೂ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯು (ಐಒಸಿ) ಹೊಂದಿದೆ. ಆದರೆ ಈ ವೇಳೆ ಕೋವಿಡ್‌ ಹಿನ್ನೆಲೆಯಲ್ಲಿ ಕ್ವಾರಂಟೈನ್‌ ಅವಧಿ ಅಳವಡಿಸಬೇಕೊ ಇಲ್ಲವೊ, ಲಸಿಕೆ ದೊರೆತ ಮೇಲೆ ಕೂಟ ನಡೆಸಬೇಕೊ ಎಂಬುದರ ವಿವರಗಳನ್ನು ಐಒಸಿ ಹಾಗೂ ಸಂಘಟಕರು ಇನ್ನಷ್ಟೇ ನೀಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT