ಸೋಮವಾರ, ಜುಲೈ 4, 2022
22 °C

ಟೂರ್ ಆಫ್ ನೀಲಗಿರೀಸ್‌ ಕಿರಣ್‌ ಕುಮಾರ್‌ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕಿರಣ್‌ ಕುಮಾರ್‌ ರಾಜು ಭಾನುವಾರ ಇಲ್ಲಿ ಕೊನೆಗೊಂಡ ರೈಡ್‌ ಎ ಸೈಕಲ್‌ ಪ್ರತಿಷ್ಠಾನದ ‘ಟೂರ್ ಆಫ್ ನೀಲಗಿರೀಸ್‌’ ಸೈಕಲ್‌ ರ‍್ಯಾಲಿಯ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು.

60 ಸೈಕ್ಲಿಸ್ಟ್‌ಗಳು ಎಂಟು ದಿನ ವಿವಿಧ ವಿಭಾಗಗಳಲ್ಲಿ ತಮ್ಮ ಸಾಮರ್ಥ್ಯ ತೋರಿದರು. ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಕಡಿದಾದ ಕಣಿವೆಗಳು, ಕಾಫಿ-ಚಹಾ ತೋಟಗಳು, ಮೂರು ಅಭಯಾರಣ್ಯಗಳನ್ನು ದಾಟಿ 850 ಕಿ.ಮೀ. ಕ್ರಮಿಸಿದರು. ಸ್ಪರ್ಧಿಗಳು ಅಂತಿಮ ದಿನ ಊಟಿಯಿಂದ ಪಿಕಾರ, ನಡುವೆಟ್ಟಂ, ಗುಡಲೂರು ಮಾರ್ಗವಾಗಿ 90 ಕಿ.ಮೀ. ಕ್ರಮಿಸಿ ಮೈಸೂರು ತಲುಪಿದರು.

ಫಲಿತಾಂಶ: ಪುರುಷರ ವಿಭಾಗ (45 ವರ್ಷದೊಳಗಿನವರು): ಕಿರಣ್‌ ಕುಮಾರ್‌ ರಾಜು–1, ದೀಪಂಕರ್‌ ಪಾಲ್‌–2, ವೆಂಕಟೇಶ್ವರ ರಾವ್‌–3.

ಹಿರಿಯರ ವಿಭಾಗ (45 ವರ್ಷ ಮೇಲಿನವರು): ತರುಣ್ ಕುಮಾರ್‌–1, ಮುರಳಿ ರಾಮಕೃಷ್ಣನ್‌–2, ಪ್ರದೀಪ್‌ ನಾಯರ್‌–3. .

ಮಹಿಳೆಯರ ವಿಭಾಗ: ಅವಂತಿ ಬಿನಿವಾಲೆ–1, ಧನಶ್ರೀ–2, ಆ್ಯನ್‌ ಸುಸಾನ್‌ ಜರಿಯಾ–3.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು