ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾವಿನಾ ಅಭ್ಯಾಸಕ್ಕೆ ನೆರವಾಗಿದ್ದ ರೋಬೋಟ್!

Last Updated 6 ಸೆಪ್ಟೆಂಬರ್ 2021, 13:04 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ನಿಂದಾಗಿ ಅಭ್ಯಾಸಕ್ಕೆ ಅಡ್ಡಿಯಾದಾಗ ಭಾವಿನಾ ಬೆನ್‌ ಪಟೇಲ್ ಅವರ ಕೈ ಹಿಡಿದದ್ದು ರೋಬೋಟ್‌. ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿರುವ ಭಾವಿನಾ ಬೆನ್‌ ಅವರಿಗೆ ಭಾರತ ಕ್ರೀಡಾ ಪ್ರಾಧಿಕಾರ ಅಭ್ಯಾಸಕ್ಕಾಗಿ ರೋಬೋಟ್ ನೆರವು ಒದಗಿಸಿತ್ತು. ಇದು ತಮ್ಮ ಭವಿಷ್ಯವನ್ನೇ ಬದಲಿಸಿತು ಎಂದು ಅವರು ಹೇಳಿದರು.

ಟೋಕಿಯೊದಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್‌ನ ಫೈನಲ್‌ನಲ್ಲಿ ಭಾವಿನಾ ಬೆನ್‌ ಅವರು ಚೀನಾದ ಜಾಂಗ್ ಮಿಯಾವೊ ಅವರ ವಿರುದ್ಧ ಸೋತು ಬೆಳ್ಳಿ ಪದಕ ಗಳಿಸಿದ್ದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದರು.

‘ಭಾರತ ಕ್ರೀಡಾ ಪ್ರಾಧಿಕಾರದ ಟಾರ್ಗೆಟ್ ಒಲಿಂಪಿಕ್ಸ್ (ಟಾಪ್) ಯೋಜನೆಯಡಿ ₹2,73,500 ಬೆಲೆಯ ಬಟರ್‌ಫ್ಲೈ ಅಮಿಕಸ್ ಪ್ರೈಮ್ ಎಂಬ ಟೇಬಲ್ ಟೆನಿಸ್ ರೋಬೋಟ್ ಮತ್ತು ₹ 2,84,707 ಮೊತ್ತದ ಒಟೊಬಾಕ್ ವ್ಹೀಲ್‌ಚೇರ್ ನೀಡಲಾಗಿತ್ತು. ಈ ರೋಬೋಟ್‌ನಲ್ಲಿ ಅನೇಕ ಅನುಕೂಲಕರ ತಂತ್ರಜ್ಞಾನವಿದ್ದು ವಿವಿಧ ಕೋನಗಳಿಂದ ಚೆಂಡನ್ನು ವೇಗವಾಗಿ ಬಿಡಲಾಗುತ್ತದೆ. ಅದು ತುಂಬ ಉಪಯುಕ್ತವಾಯಿತು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT