ಬುಧವಾರ, ಜೂನ್ 29, 2022
27 °C

ಆರ್ಚರಿ: ಭಾರತ ಪುರುಷರ ತಂಡಕ್ಕೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗ್ವಾಂಗ್ಜು, ದಕ್ಷಿಣ ಕೊರಿಯಾ (ಪಿಟಿಐ): ಭಾರತ ಪುರುಷರ ಕಂಪೌಂಡ್ ಆರ್ಚರಿ ತಂಡವು ಶನಿವಾರ  ವಿಶ್ವಕಪ್ ಸ್ಟೇಜ್‌ಗಳಲ್ಲಿ ಸತತ ಎರಡನೇ ಚಿನ್ನದ ಪದಕ ಜಯಿಸಿತು. 

ವೈಯಕ್ತಿಕ ವಿಭಾಗದಲ್ಲಿ ವಿಶ್ವ ಚಾಂಪಿಯನ್ ನಿಕೊ ವೀನರ್ ವಿರುದ್ಧ ಸೆಣಸಿದ ಮೋಹನ್ ಭಾರದ್ವಾಜ್ ಬೆಳ್ಳಿ ಪದಕ ಪಡೆದರು. ಮಹಿಳೆಯರ ತಂಡ ವಿಭಾಗದಲ್ಲಿ ಭಾರತವು ಕಂಚಿನ ಪದಕ ಪಡೆದರು. 

ಸ್ಟೇಜ್ ಟು ವಿಶ್ವಕಪ್‌ನಲ್ಲಿ ಭಾರತ ತಂಡವು ಐದು ಪದಕಗಳೊಂದಿಗೆ ತನ್ನ ಅಭಿಯಾನ ಮುಗಿಸಿತು. ಅದರಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಮೂರು  ಕಂಚಿನ ಪದಕಗಳು ಸೇರಿವೆ. 

ಟಾಪ್ಸ್‌ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ) ಪ್ರೋತ್ಸಾಹ ಪಡೆದಿರುವ ಭರವಸೆಯ ಆರ್ಚರ್‌ಗಳು ಈ ಸಾಧನೆ ಮಾಡಿದರು.  ಅಭಿಷೇಕ್ ವರ್ಮನ್, ರಜತ್ ಚೌಹಾಣ ಮತ್ತು ಅಮನ್ ಸೈನಿ ಅವರಿದ್ದ ಪುರುಷರ ತಂಡವು ಫ್ರಾನ್ಸ್ ಎದುರು ಜಯ ಸಾಧಿಸಿ ಚಿನ್ನ ಗಳಿಸಿತು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು