ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಲ್‌ಚೇರ್ ಟೆನಿಸ್‌ ಆಟಗಾರರ ತರಬೇತಿ ಶಿಬಿರ

Last Updated 21 ಡಿಸೆಂಬರ್ 2019, 19:55 IST
ಅಕ್ಷರ ಗಾತ್ರ

ಬೆಂಗಳೂರು: ಅಖಿಲ ಭಾರತ ಟೆನಿಸ್‌ ಸಂಸ್ಥೆಯು (ಎಐಟಿಎ), ಭಾರತ ವೀಲ್‌ಚೇರ್‌ ಟೆನಿಸ್‌ ಟೂರ್‌ (ಐಡಬ್ಲ್ಯುಟಿಟಿ) ಹಾಗೂ ಕರ್ನಾಟಕ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್ಎಲ್‌ಟಿಎ) ಸಹಯೋಗದೊಂದಿಗೆ ವೀಲ್‌ಚೇರ್‌ ಟೆನಿಸ್‌ ಆಟಗಾರರಿಗೆ ಹಾಗೂ ಕೋಚ್‌ಗಳಿಗೆ ತರಬೇತಿ ಶಿಬಿರ ಆಯೋಜಿಸಿದೆ.

ಡಿ.20ರಂದು ಆರಂಭವಾಗಿರುವ ಶಿಬಿರವನ್ನು ಖ್ಯಾತ ಕೋಚ್‌ ನೆದರ್ಲೆಂಡ್ಸ್‌ನ ಮಾರ್ಕ್‌ ಕಾಲ್ಕ್‌ಮನ್‌ ಹಾಗೂ ಅವರ ಪತ್ನಿ, ನಾಲ್ಕು ಬಾರಿಯ ಪ್ಯಾರಾಲಿಂಪಿಕ್ಸ್ ಪದಕ ವಿಜೇತೆ ಮೊನಿಕ್‌ ಕಾಲ್ಕ್‌ಮನ್‌ ವ್ಯಾನ್‌ ಡೆನ್‌ ಬಾಷ್‌ ನಡೆಸಿಕೊಡುತ್ತಿದ್ದಾರೆ.

ಕೆಎಸ್‌ಎಲ್‌ಟಿಎ ಅಂಗಣದಲ್ಲಿ ಮೂರು ದಿನಗಳ ಕಾಲ ನಡೆಯುವ ಶಿಬಿರದಲ್ಲಿ 29 ಆಟಗಾರರು ಭಾಗವಹಿಸಿದ್ದಾರೆ.

ಶಿಬಿರದ ಕುರಿತು ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕೆಎಸ್‌ಎಲ್‌ಟಿಎ ಜಂಟಿ ಕಾರ್ಯದರ್ಶಿ ಪಿ.ಆರ್‌.ರಾಮಸ್ವಾಮಿ ‘ಅಂಗವಿಕಲ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಕೆಎಸ್‌ಎಲ್‌ಟಿಎ ಸಾಧ್ಯವಾದಷ್ಟು ಇಂತಹ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸ ಮಾಡುತ್ತಿದೆ ಎಂದರು.

‘ಭಾರತದಲ್ಲಿ ವೀಲ್‌ಚೇರ್‌ ಟೆನಿಸ್‌ನ ಬೆಳವಣಿಗೆಗೆ ಯೋಜನೆ ರೂಪಿಸಲಾಗುತ್ತಿದೆ. 2022ರ ಏಷ್ಯನ್‌ ಗೇಮ್ಸ್‌ನಲ್ಲಿ ಆಡುವಂತೆ ಸಜ್ಜುಗೊಳಿಸುವುದು ನಮ್ಮ ಮೊದಲ ಗುರಿಯಾಗಿದೆ’ ಎಂದು ಅಖಿಲ ಭಾರತ ವೀಲ್‌ಚೇರ್‌ ಟೆನಿಸ್‌ ಟೂರ್‌ ಅಧ್ಯಕ್ಷ ಸುನಿಲ್‌ ಜೈನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT