ಮಂಗಳವಾರ, ಡಿಸೆಂಬರ್ 7, 2021
20 °C
ಕಲೈವಾಣಿ, ಜಮುನಾಗೂ ಜಯ

ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್: ಸೆಮಿಫೈನಲ್‌ಗೆ ಮಂಜು ರಾಣಿ, ನಿಖತ್ ಜರೀನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹಿಸ್ಸಾರ್: ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಮಂಡಳಿಯ ಮಂಜು ರಾಣಿ ಮತ್ತು ತೆಲಂಗಾಣದ ನಿಖತ್ ಜರೀನ್ ಅವರು ಮಹಿಳೆಯರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು. 

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಮಂಜು ರಾಣಿ 48 ಕೆಜಿ ವಿಭಾಗದಲ್ಲಿ ಪಂಜಾಬ್‌ನ ಮೀನಾಕ್ಷಿ ವಿರುದ್ಧ 5–0ಯಿಂದ ಜಯ ಗಳಿಸಿದರು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿರುವ ನಿಖತ್ ಜರೀನ್ 52 ಕೆಜಿ ವಿಭಾಗದಲ್ಲಿ ಅಸ್ಸಾಂನ ಮಂಜು ಬಸುಮತರಿ ವಿರುದ್ಧ ಪಾರಮ್ಯ ಮೆರೆದು 5–0 ಅಂತರದ ಗೆಲುವು ಸಾಧಿಸಿದರು.

48 ಕೆಜಿ ವಿಭಾಗದ ಬೌಟ್‌ನಲ್ಲಿ ತಮಿಳುನಾಡಿನ ಎಸ್.ಕಲೈವಾಣಿ ಹಿಮಾಚಲಪ್ರದೇಶದ ಜ್ಯೋತಿಕಾ ಬಿಷ್ಠ್‌ ಅವರನ್ನು ಮಣಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು. ಅಸ್ಸಾಂನ ಜಮುನಾ ಬೋರೊ 54 ಕೆಜಿ ವಿಭಾಗದಲ್ಲಿ ಉತ್ತರಾಖಂಡದ ಗಾಯತ್ರಿ ಕಸನ್ಯಾಳ್‌ ವಿರುದ್ಧ 5–0ಯಿಂದ ಗೆದ್ದರು. ಜಮುನಾ 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದರು. 

54 ಕೆಜಿ ವಿಭಾಗದ ಮತ್ತೊಂದು ಹಣಾಹಣಿಯಲ್ಲಿ ರೈಲ್ವೆ ಮಂಡಳಿಯ ಶಿಖಾ, ಯೂತ್ ವಿಶ್ವ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ವಿಜೇತೆ ಮಣಿಪುರದ ಬೇಬಿರೋಜಿಸಾನ ನೌರೆಮ್ ವಿರುದ್ಧ 5–0ಯಿಂದ ಜಯ ಸಾಧಿಸಿದರು. 50 ಕೆಜಿ ವಿಭಾಗದ ಬೌಟ್‌ನಲ್ಲಿ ಪಂಜಾಬ್‌ನ ಕೋಮಲ್ 5–0ಯಿಂದ ಮಹಾರಾಷ್ಟ್ರದ ಅಂಜಲಿ ಗುಪ್ತಾ ಅವರನ್ನು ಮಣಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು