ಭಾನುವಾರ, ಜನವರಿ 17, 2021
19 °C

ಡೋಪಿಂಗ್ ಪರೀಕ್ಷೆ ತಪ್ಪಿಸಿಕೊಂಡಿದ್ದ ವಿಶ್ವ ವೇಗಿ ಕ್ರಿಸ್ಟಿಯನ್ ಕೋಲ್ಮನ್ ಅಮಾನತು

ಎಪಿ Updated:

ಅಕ್ಷರ ಗಾತ್ರ : | |

ಕ್ರಿಸ್ಟಿಯನ್ ಕೋಲ್ಮನ್

ಡಸೆಲ್‌ಡಾರ್ಫ್‌, ಜರ್ಮನಿ: ಹೋದ ವರ್ಷ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ‘ವೇಗದ ರಾಜ’ನಾಗಿದ್ದ ಕ್ರಿಸ್ಟಿಯನ್ ಕೋಲ್ಮನ್ ಅವರನ್ನು ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ ಹಾಜರಾಗದ ಕಾರಣ ಅಮಾನತು ಮಾಡಲಾಗಿದೆ.

ಅಮೆರಿಕದ ಕ್ರಿಸ್ಟಿಯನ್ ಅವರು ಹೋದ ವರ್ಷ ವಿಶ್ವ ಆಥ್ಲೆಟಿಕ್ಸ್‌ನಲ್ಲಿ 100 ಮೀಟರ್ಸ್‌ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದರು. ಬುಧವಾರ ಇಲ್ಲಿ ನಡೆದ ಅಥ್ಲೆಟಿಕ್ಸ್ ಇಂಟಿಗ್ರಿಟಿ ಯೂನಿಟ್ ಕೂಟದಿಂದ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಯಿತು.

ಹೋದ ವರ್ಷ ವಿಶ್ವ ಅಥ್ಲೆಟಿಕ್ಸ್‌ಗೂ ಮುನ್ನ ತಮ್ಮ ಚಲನವಲನದ ಕುರಿತು ಮಾಹಿತಿ ನೀಡುವ ನಿಯಮವನ್ನು ಮುರಿದಿದ್ದ ಆರೋಪವನ್ನೂ ಕೋಲ್ಮನ್ ಎದುರಿಸಿದ್ದರು.

ಹೋದ ಡಿಸೆಂಬರ್‌ನಲ್ಲಿ ಮದ್ದು ಪರೀಕ್ಷಕರು ದೂರವಾಣಿ ಕರೆ ಮಾಡಿದಾಗಲೂ ಕೋಲ್ಮನ್ ಸ್ವೀಕರಿಸಿರಲಿಲ್ಲ. ಈ ಕುರಿತು ಅಧಿಕಾರಿಗಳು ವಿಚಾರಣೆ ನಡೆಸಿದಾಗ, ‘ನಾನು ಕರೆ ಸ್ವೀಕರಿಸಿದ್ದೇನೆ’ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ್ದ ಕೋಲ್ಮನ್, ‘ಡಿಸೆಂಬರ್ 9ರಂದು ನಾನು ಪರೀಕ್ಷೆ ತಪ್ಪಿಸಿಕೊಳ್ಳುವಂತೆ ಷಡ್ಯಂತ್ರ ಮಾಡಲಾಗಿದೆ’ ಎಂದು ಬರೆದಿದ್ದರು.

ಆದರೆ ಅಮೆರಿಕ ಉದ್ದೀಪನ ಮದ್ದು ತಡೆ ಘಟಕವು ಇದನ್ನು ಅಲ್ಲಗಳೆಯುತ್ತಿದೆ. ಒಂದೊಮ್ಮೆ ಈಗಿನ ಆರೋಪವು ಸಾಬೀತಾದರೆ ಕೋಲ್ಮನ್ ಎರಡು ವರ್ಷಗಳ ನಿಷೇಧ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅದರಿಂದಾಗಿ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು