ಶನಿವಾರ, ಮಾರ್ಚ್ 6, 2021
32 °C
ಬೆಂಗಳೂರು ಜಿಲ್ಲೆಗೆ ದ್ವಿತೀಯ ಸ್ಥಾನ

ಕರ್ನಾಟಕ ರಾಜ್ಯ ವುಷು ಚಾಂಪಿಯನ್‌ಷಿಪ್‌: ಬಾಗಲಕೋಟೆಗೆ ಅಗ್ರಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ರಾಜ್ಯ ವುಷು ಸಂಸ್ಥೆಯ ಆಶ್ರಯದಲ್ಲಿ ಸೋಮವಾರ ಗದಗದಲ್ಲಿ ಕೊನೆಗೊಂಡ ರಾಜ್ಯ ವುಷು ಚಾಂಪಿಯನ್‌ಷಿಪ್‌ನಲ್ಲಿ ಬಾಗಲಕೋಟೆ ವುಷು ಸಂಸ್ಥೆಯು ಮೊದಲ ಸ್ಥಾನ ಗಳಿಸಿತು. ಎರಡು ದಿನಗಳ ಕಾಲ ನಡೆದ ಟೂರ್ನಿಯಲ್ಲಿ ಬೆಂಗಳೂರು ಜಿಲ್ಲೆಯು ದ್ವಿತೀಯ ಸ್ಥಾನ ಗಳಿಸಿದರೆ, ಮೂರನೇ ಸ್ಥಾನವು ಶಿವಮೊಗ್ಗ ಜಿಲ್ಲಾ ಸಂಸ್ಥೆಯ ಪಾಲಾಗಿದೆ.

ಅಗ್ರಸ್ಥಾನ ಗಳಿಸಿದ ಬಾಗಲಕೋಟೆ ಜಿಲ್ಲೆಯು ಸಬ್‌ಜೂನಿಯರ್‌, ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳು ಸೇರಿ ಒಟ್ಟು 32 ಚಿನ್ನ, 16 ಬೆಳ್ಳಿ ಹಾಗೂ 21 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಬೆಂಗಳೂರು ಜಿಲ್ಲೆಯು 27 ಚಿನ್ನ, ಆರು ಬೆಳ್ಳಿ ಹಾಗೂ 11 ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಶಿವಮೊಗ್ಗ ಜಿಲ್ಲೆಯ ತಂಡವು 11 ಚಿನ್ನ, ಆರು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿತು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು