ಶುಕ್ರವಾರ, ಜುಲೈ 1, 2022
21 °C
ಕರ್ನಾಟಕ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿ

ಯಶಸ್ವಿನಿಗೆ ಪ್ರಶಸ್ತಿ ಡಬಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೋಘ ಆಟವಾಡಿದ ಯಶಸ್ವಿನಿ ಘೋರ್ಪಡೆ ಅವರು ಕರ್ನಾಟಕ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಎರಡು ಪ್ರಶಸ್ತಿಗಳನ್ನು ಜಯಿಸಿದ್ದಾರೆ. ರಾಜ್ಯ ಟೇಬಲ್‌ ಟೆನಿಸ್‌ ಸಂಸ್ಥೆಯು (ಕೆಟಿಟಿಎ) ಮಲ್ಲೇಶ್ವರಂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ಯಶಸ್ವಿನಿ, ಬಾಲಕಿಯರ ಯೂತ್‌ ಹಾಗೂ ಜೂನಿಯರ್‌ ವಿಭಾಗಗಳಲ್ಲಿ ಅಗ್ರಸ್ಥಾನ ಗಳಿಸಿದರು.

ಜೂನಿಯರ್ ಬಾಲಕರ ವಿಭಾಗದಲ್ಲಿ ಆಕಾಶ್‌ ಕೆ.ಜೆ, ಯೂತ್‌ ವಿಭಾಗದಲ್ಲಿ ಸಮ್ಯಕ್‌ ಕಶ್ಯಪ್, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರಾಜ ಕುಂದು, ಮಹಿಳಾ ಸಿಂಗಲ್ಸ್‌ನಲ್ಲಿ ಅನರ್ಘ್ಯ ಮಂಜುನಾಥ್‌ ಪ್ರಶಸ್ತಿ ಗೆದ್ದರು.

ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ರಾಜ ಕುಂದು ಅವರು 8-11,12-10,11-6,12-14,11-6,6-11,11-8 ರಿಂದ ಕೌಸ್ತುಭ್ ಕುಲಕರ್ಣಿ ಅವರನ್ನು ಸೋಲಿಸಿದರು. ನಾಲ್ಕರ ಘಟ್ಟದ ಪಂದ್ಯಗಳಲ್ಲಿ ರಾಜ 14-12,11-8,4-11,11-8,5-11,11-7ರಿಂದ ರಕ್ಷಿತ್‌ ಬಾರಿಗಿಡದ ಅವರನ್ನು, ಕೌಸ್ತುಭ್‌ 7-11,6-11,8-11,11-8,12-10,11-9,11-8ರಿಂದ ಎಂ. ಕಳೈವನನ್‌ ಅವರಿಗೆ ಸೋಲುಣಿಸಿದರು.

ಮಹಿಳಾ ಸಿಂಗಲ್ಸ್ ಫೈನಲ್‌ ಹಣಾಹಣಿಯಲ್ಲಿ ಅನರ್ಘ್ಯ ಮಂಜುನಾಥ್‌ 11-7,9-11,9-11,11-3,11-8,12-10ರಿಂದ ವಿ.ಖುಷಿ ಅವರಿಗೆ ಸೋಲುಣಿದರು. ಸೆಮಿಫೈನಲ್‌ನಲ್ಲಿ ಅನರ್ಘ್ಯ 12-14,12-10,8-11,11-6,11-7,11-7ರಿಂದ ಯಶಸ್ವಿನಿ ಅವರನ್ನು, ಖುಷಿ 11-6,5-11,11-9,11-6,11-9ರಿಂದ ಮರಿಯಾ ರೋನಿ ಅವರನ್ನು ಮಣಿಸಿದರು.

ಬಾಲಕರ ಯೂತ್ ವಿಭಾಗದಲ್ಲಿ ಸಮ್ಯಕ್‌ 7-11,8-11,11-7,14-12,11-5,11-9ರಿಂದ ಕೌಸ್ತುಭ್‌ ಮಿಲಿಂದ್‌ ಕುಲಕರ್ಣಿ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಸಮ್ಯಕ್‌ 12-10,4-11,8-11,11-7,9-11,11-8,11-6ರಿಂದ ಶ್ರೀಕಾಂತ್‌ ಕಶ್ಯಪ್‌ ಎದುರು, ಕೌಸ್ತುಭ್‌ 12-14,11-8,11-8,9-11,6-11,11-8,11-8ರಿಂದ ಆಕಾಶ್‌ ಕೆ.ಜೆ. ಅವರನ್ನು ಮಣಿಸಿದ್ದರು.

ಬಾಲಕಿಯರ ಯೂತ್‌ ವಿಭಾಗದ ಫೈನಲ್‌ ಸೆಣಸಾಟದಲ್ಲಿ ಯಶಸ್ವಿನಿ 11-13,11-4,11-6,11-7,11-9ರಿಂದ ಕರುಣಾ ಗಜೇಂದ್ರನ್ ಅವರಿಗೆ ಸೋಲುಣಿಸಿದರು. ಸೆಮಿಫೈನಲ್‌ ಪಂದ್ಯಗಳಲ್ಲಿ ಯಶಸ್ವಿನಿ 11-3,12-10,11-7,11-9ರಿಂದ ವಿ.ಖುಷಿ ಎದುರು ಹಾಗೂ ಕರುಣಾ 11-4,11-8,11-6,7-11,11-6ರಿಂದ ಅನರ್ಘ್ಯ ಮಂಜುನಾಥ್ ವಿರುದ್ಧ ಜಯ ಸಾಧಿಸಿದ್ದರು.

ಬಾಲಕಿಯರ ಜೂನಿಯರ್ ವಿಭಾಗದ ಅಂತಿಮ ಪಂದ್ಯದಲ್ಲಿ ಯಶಸ್ವಿನಿ 11-6,11-8,11-9,6-11,11-8ರಿಂದ ಕರುಣಾ ಗಜೇಂದ್ರನ್‌ ಅವರ ಸವಾಲು ಮೀರಿದರು. ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಕರುಣಾ 11-8,11-9,11-9,13-11ರಿಂದ ಪಿ.ಎಮ್‌.ಶ್ವೇತಾ ಎದುರು, ಯಶಸ್ವಿನಿ 11-4,9-11,11-5,11-4,11-5ರಿಂದ ಅದಿತಿ ಜೋಷಿ ಅವರನ್ನು ಪರಾಭವಗೊಳಿಸಿದರು.

ಬಾಲಕರ ಜೂನಿಯರ್‌ ವಿಭಾಗದ ಫೈನಲ್ ಹಣಾಹಣಿಯಲ್ಲಿ ಆಕಾಶ್‌ 11-4,11-7,9-11,11-13,11-7,7-11,12-10ರಿಂದ ಸಮ್ಯಕ್‌ ಕಶ್ಯಪ್‌ ಅವರನ್ನು ಮಣಿಸಿದರು. ಇದಕ್ಕೂ ಮೊದಲು ಸೆಮಿಫೈನಲ್ ಪಂದ್ಯಗಳಲ್ಲಿ ಕಶ್ಯಪ್‌ 11-7,11-6,11-7,11-7ರಿಂದ ಸೃಜನ್‌ ಭಾರದ್ವಾಜ್‌ ಎದುರು, ಆಕಾಶ್‌ 11-8,4-11,11-9,11-8,13-11ರಿಂದ ಪಿ.ವಿ.ಶ್ರೀಕಾಂತ್‌ ಕಶ್ಯಪ್‌ ಅವರನ್ನು ಸೋಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು