ಶನಿವಾರ, ಜೂನ್ 25, 2022
21 °C
ರಾಷ್ಟ್ರೀಯ ಜೂನಿಯರ್, ಯೂತ್ ಟೇಬಲ್ ಟೆನಿಸ್ ಟೂರ್ನಿ

ರಾಷ್ಟ್ರೀಯ ಜೂನಿಯರ್, ಯೂತ್ ಟೇಬಲ್ ಟೆನಿಸ್ ಟೂರ್ನಿ: ಯಶಸ್ವಿನಿ ಕೈ ತಪ್ಪಿದ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೀರೋಚಿತ ಆಟವಾಡಿದ ಕರ್ನಾಟಕದ ಯಶಸ್ವಿನಿ ಘೋರ್ಪಡೆ ರಾಷ್ಟ್ರೀಯ ಯೂತ್ ಹಾಗೂ ಜೂನಿಯರ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಯೂತ್ ಬಾಲಕಿಯರ ವಿಭಾಗದಲ್ಲಿ ಅವರು ಎರಡನೇ ಸ್ಥಾನ ಗಳಿಸಿದರು.

ಮಂಗಳವಾರ ನಡೆದ ಫೈನಲ್ ಹಣಾಹಣಿಯಲ್ಲಿ ಯಶಸ್ವಿನಿ 11–8, 7–11, 8–11, 12–10, 11–5, 8–11, 3–11ರಿಂದ  ಹಾಲಿ ಚಾಂಪಿಯನ್‌ ಮಹಾರಾಷ್ಟ್ರದ ದಿವ್ಯಾ ಚಿತಾಲೆ ಎದುರು ಎಡವಿದರು. ಆರಂಭದ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿ ಪಂದ್ಯ ಕೈಚೆಲ್ಲಿದರು. ಆದರೆ ಅವರು ತೋರಿದ ಹೋರಾಟ ಗಮನಸೆಳೆಯಿತು.

ನಾಲ್ಕರ ಘಟ್ಟದ ಪಂದ್ಯದಲ್ಲಿ ಯಶಸ್ವಿನಿ ಭರ್ಜರಿ ಜಯ ಸಾಧಿಸಿದ್ದರು. ಮಹಾರಾಷ್ಟ್ರದ ಅನನ್ಯಾ ಬಾಸಕ್ ಅವರನ್ನು 7-11,11-3,11-6,11-8,11-4ರಿಂದ ಸೋಲಿಸಿದ್ದರು. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ ಪುಟಿದೆದ್ದು ಗೆಲುವು ಒಲಿಸಿಕೊಂಡಿದ್ದರು.

ಚಿನ್ನ ಗೆದ್ದ ಸ್ವಸ್ತಿಕಾ: ಜೂನಿಯರ್ ಬಾಲಕಿಯರ ವಿಭಾಗದ ಪ್ರಶಸ್ತಿಯು ಮಹಾರಾಷ್ಟ್ರದ ಸ್ವಸ್ತಿಕಾ ಘೋಷ್ ಪಾಲಾಯಿತು. ಅಂತಿಮ ಪಂದ್ಯದಲ್ಲಿ ಅವರು 7-11, 11-13, 11-7, 11-4, 11-6, 11-9ರಿಂದ ಹರಿಯಾಣದ ಸುಹಾನ ಸೈನಿ ಎದುರು ಗೆದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು