ಬುಧವಾರ, ಜುಲೈ 6, 2022
22 °C
ಚಳಿಗಾಲದ ಪ್ರತಿಷ್ಠಿತ ರೇಸ್‌ನಲ್ಲಿ ಸಡಗರ

ನಿರೀಕ್ಷೆಯಂತೆ ಝೂಕರೆಲಿಗೆ ಕಿಂಗ್‌ಫಿಷರ್ ಅಲ್ಟ್ರಾ ಡರ್ಬಿ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿರೀಕ್ಷೆಯಂತೆ ಝೂಕರೆಲಿ ಬುಧವಾರ ಮುಕ್ತಾಯವಾದ ಬೆಂಗಳೂರು ಚಳಿಗಾಲದ ಪ್ರತಿಷ್ಠಿತ ಕಿಂಗ್‌ಫಿಷರ್ ಅಲ್ಟ್ರಾ ಡರ್ಬಿ ರೇಸ್‌ನಲ್ಲಿ ಪ್ರಶಸ್ತಿ ಜಯಿಸಿತು.

ಪೆಸಿ ಶ್ರಾಫ್‌ ತರಬೇತಿಯಲ್ಲಿ ಪಳಗಿರುವ ಝೂಕರೆಲಿಯು ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಬುಧವಾರ ಮಧ್ಯಾಹ್ನ ಸೇರಿದ್ದ ರೇಸ್‌ಪ್ರಿಯರನ್ನು ನಿರಾಶೆಗೊಳಿಸಲಿಲ್ಲ.   ಏಳು ಸ್ಪರ್ಧಿಗಳಿದ್ದ ಕಣದಲ್ಲಿ ಝೂಕರೆಲಿಯನ್ನು ಸವಾರಿ ಮಾಡಿದ ಜಾಕಿ ಟ್ರೆವರ್ ಪಟೇಲ್ ಜಯಭೇರಿ ಬಾರಿಸಿದರು.   

ರೇಸ್‌ ಪ್ರಾರಂಭದಲ್ಲಿ ರೆವಲ್ಯೂಷನ್‌, 1000 ಮೀಟರ್ಸ್‌ ದಾಟಿದ ನಂತರ ಸಿಲ್ವೇರಿಯಸ್‌ ಲೀಡ್‌ ಪಡೆದು
ಓಡುತ್ತಿದ್ದರೆ, ಝೂಕರೆಲಿ ಕೊನೆಯ ಸ್ಥಾನದಲ್ಲಿ ಓಡುತ್ತಲಿತ್ತು. ಕೊನೆಯ 600 ಮೀಟರ್ಸ್‌ ತಿರುವಿನಲ್ಲಿ ವೇಗ ಹೆ್ಚ್ಚಿಸಿಕೊಂಡ ಝೂಕರೆಲಿ ನಾಲ್ಕನೇ ಸ್ಥಾನಕ್ಕೆ ಮುನ್ನುಗಿತು.

ಆನಂತರ ಕೊನೆಯ ಹಂತದ ನೇರ ಓಟದಲ್ಲಿ, ಬಿಲ್ಲಿನಿಂದ ಬಿಡುಗಡೆಯಾದ ಬಾಣದಂತೆ ನುಗ್ಗಿದ ಝೂಕರೆಲೆ   ಪ್ರತಿಸ್ಪರ್ಧಿಗಳನ್ನು  ಹಿಂದಿಕ್ಕಿ 15 ¼ ಲೆಂತ್‌ನಿಂದ ಡರ್ಬಿ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಕೊನೆಯ ನೇರ ಓಟದ ಪ್ರಾರಂಭದಲ್ಲಿ ಲೀಡ್‌ ಪಡೆದಿದ್ದ ಆಲ್‌ ಅಟ್ರ್ಯಾಕ್ಟಿವ್‌ ಪ್ರಯಾಸದಿಂದ ಸಿಲ್ವೇರಿಯಸ್‌ ಅನ್ನು ಒಂದು ಲೆಂತ್‌ ಅಂತರದಿಂದ ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆಯಿತು. ಎಟರ್ನಲ್‌ ಬ್ಲೇಝ್‌ ನಾಲ್ಕನೇ ಸ್ಥಾನ ಗಳಿಸುವಲ್ಲಿ ಸಫಲವಾಯಿತು. ಡರ್ಬಿಯ 2400 ಮೀಟರ್ಸ್‌ ಕ್ರಮಿಸಲು ಝೂಕರೆಲಿ 2 ನಿಮಿಷ 31.244 ಸೆಕೆಂಡು ಸಮಯ ತೆಗೆದುಕೊಂಡಿದೆ.

ಈ ಗೆಲುವಿನೊಂದಿಗೆ ತನ್ನ ಮಾಲೀಕರಿಗೆ ಸುಮಾರು ಎರಡು ಲಕ್ಷ ಮೌಲ್ಯದ ಸುಂದರ ಟ್ರೋಫಿಯೊಂದಿಗೆ ಒಟ್ಟು ಮೊದಲನೇ ಬಹುಮಾನ  ₹ 82.77 ಲಕ್ಷಗಳಲ್ಲಿ ₹ 68.29 ಲಕ್ಷಗಳನ್ನು ತನ್ನ ಮಾಲೀಕರಿಗೆ ದೊರೆಕಿಸಿಕೊಟ್ಟಿದೆ.

ಆರು ಬಹುಮಾನಗಳನ್ನು ಪಡೆದ ಕುದುರೆಗಳ ವಿವರ:

ಗಳಿಸಿದ ಕುದುರೆ ಕುದುರೆ ಟ್ರೈನರ್‌ ಜಾಕಿ ಸಮಯ ಒಟ್ಟು ಬಹುಮಾನದ

ಸ್ಥಾನ; ಸಂಖ್ಯೆ; ಹೆಸರು; ಟ್ರೇನರ್; ಜಾಕಿ; ಸಮಯ; ಬಹುಮಾನದ ಮೊತ್ತ (₹)

1; 5; ಝೂಕರೆಲಿ; ಪೆಸಿ ಶ್ರಾಫ್‌; ಟ್ರೆವರ್‌ ಪಟೇಲ್‌; 2ನಿ,31.24ಸೆ;  82,77,391
2; 1; ಆಲ್‌ ಅಟ್ರ್ಯಾಕ್ಟಿವ್‌; ಬಿ.ಪೃಥ್ವಿರಾಜ್‌; ಸೂರಜ್‌ ನರೇಡು; 2:33.74; .27,59,130
3; 4; ಸಿಲ್ವೇರಿಯಸ್‌; ಅರ್ಜನ್‌ ಮಂಗ್ಳೋರ್ಕರ್‌; ಶ್ರೀನಾಥ್‌; 2:33.91; 13,79,565
4; 6; ಎಟರ್ನಲ್‌ ಬ್ಲೇಝ್‌; ಎಸ್‌.ಗಣಪತಿ; ಸಿ.ಎಸ್‌.ಜೋಧ; 2:34.11;  6,89,783
5; 3; ಎಟೋಷಾ; ನೀಲ್‌ ದಾರಾಶ; ಎ.ಸಂದೇಶ್‌; 2:37.17;  4,13,869
6; 2; ಏಂಜಲಿಕೊ; ಅಟ್ಟೋಲಾಹಿ; ಅಕ್ಷಯ್‌ಕುಮಾರ್‌; 2:37.98;   2,75,912


ಕಿಂಗ್‌ಫಿಷರ್ ಅಲ್ಟ್ರಾ ಡರ್ಬಿ ವೀಕ್ಷಿಸಲು ಬಂದ ರೇಸ್ ಪ್ರಿಯರು –ಪ್ರಜಾವಾಣಿ ಚಿತ್ರ


ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಬುಧವಾರ ನಡೆದ ದ ಕಿಂಗ್‌ಫಿಷರ್ ಅಲ್ಟ್ರಾ ಡರ್ಬಿ ರೇಸ್‌ ವೀಕ್ಷಿಸಲು ಬಂದಿದ್ದ ನಟ ಅಭಿಷೇಕ್ ಅಂಬರೀಷ್  –ಪ್ರಜಾವಾಣಿ ಚಿತ್ರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು