ಬೆಂಗಳೂರು: ಸಾತ್ವಿಕ್ ಎಂ. ಮತ್ತು ಸಾಕ್ಷ್ಯಾ ಸಂತೋಷ್ ಅವರು ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 13 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ಗಳಾಗಿ ಹೊರಹೊಮ್ಮಿದರು.

ನಗರದ ವಿ.ವಿ.ಪುರಂನ ಮ್ಯಾಚ್ ಪಾಯಿಂಟ್ ಅಕಾಡೆಮಿಯಲ್ಲಿ ಟೂರ್ನಿಯ ಕೊನೆಯ ದಿನವಾದ ಭಾನುವಾರ ಫೈನಲ್ ಪಂದ್ಯದಲ್ಲಿ ಸಾತ್ವಿಕ್ 12-10, 11-13, 8-11, 11-6, 11-8ರಿಂದ ಸಿದ್ಧಾಂತ್ ಎಂ. ಅವರನ್ನು ಸೋಲಿಸಿದರು. ಸೆಮಿಫೈನಲ್ನಲ್ಲಿ ಸಾತ್ವಿಕ್ 11-8, 11-8, 13-15, 11-8ರಿಂದ ಅಂಕುಶ್ ಬಾಳಿಗಾ ವಿರುದ್ಧ; ಸಿದ್ಧಾಂತ್ 5-11, 11-8, 6-11, 12-10, 11-9ರಿಂದ ಸುಚೇತ್ ಸಿ. ವಿರುದ್ಧ ಗೆಲುವು ಸಾಧಿಸಿದರು.

ಬಾಲಕಿಯರ ಫೈನಲ್ನಲ್ಲಿ ಸಾಕ್ಷ್ಯಾ 11-7, 11-6, 11-4ರಿಂದ ಮಿಹಿಕಾ ಆರ್.ಉಡುಪ ಅವರನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ಮಿಹಿಕಾ 11-7, 11-6, 10-12, 14-12ರಿಂದ ವಿಭಾ ಟಿ. ಎದುರು; ಸಾಕ್ಷ್ಯಾ 11-6, 11-9, 11-9ರಿಂದ ಯುಕ್ತಾ ಹರ್ಷ ಎದುರು ಜಯ ಸಾಧಿಸಿದರು.

ಹೋಪ್ಸ್ ಬಾಲಕರ ವಿಭಾಗದಲ್ಲಿ ಅರ್ಣವ್ ಮಿಥುನ್ ಮತ್ತು ಬಾಲಕಿಯರ ವಿಭಾಗದಲ್ಲಿ ಸಾಕ್ಷ್ಯಾ ಸಂತೋಷ್ ಪ್ರಶಸ್ತಿ ಗೆದ್ದರು. ಫೈನಲ್ನಲ್ಲಿ ಅರ್ಣವ್ 11-4, 12-10, 9-11, 11-9ರಿಂದ ಶರ್ವಿಲ್ ಕೆ. ವಿರುದ್ಧ ಗೆಲುವು ಸಾಧಿಸಿದರು. ಪ್ರಶಸ್ತಿ ಸುತ್ತಿನಲ್ಲಿ ಸಾಕ್ಷ್ಯಾ 11-4, 11-5, 11-8ರಿಂದ ನಂದನ ಬಂಡಿ ಅವರನ್ನು ಮಣಿಸಿದರು.

ಎನ್ಎಂಎಸ್ ವಿಭಾಗದಲ್ಲಿ ಕೆ.ಎಸ್. ಸಾಯಿ ಪ್ರಶಾಂತ್ ಚಾಂಪಿಯನ್ ಆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.