ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್ ಟೆನಿಸ್ ಟೂರ್ನಿ ಅಜರೆಂಕಾಗೆ ನೇರ ಪ್ರವೇಶ ಇಲ್ಲ?

Last Updated 23 ಜುಲೈ 2018, 9:43 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಎಪಿ): ಎರಡು ಬಾರಿಯ ರನ್ನರ್‌ ಅಪ್‌, ವಿಕ್ಟೋರಿಯಾ ಅಜರೆಂಕಾ ಅವರಿಗೆ ಈ ಬಾರಿಯ ಅಮೆರಿಕ ಓಪನ್ ಟೆನಿಸ್ ಟೂರ್ನಿಗೆ ನೇರ ಪ್ರವೇಶ
ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.

101ರ ವರೆಗೆ ರ‍್ಯಾಂಕ್ ಹೊಂದಿರುವವರಿಗೆ ನೇರ ಪ್ರವೇಶದ ಅವಕಾಶವಿದೆ. ಆದರೆ ಅಜರೆಂಕಾ ಅವರು ಈ ವಾರ ಬಿಡುಗಡೆಗೊಂಡಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ 108ನೇ ಸ್ಥಾನದಲ್ಲಿದ್ದಾರೆ.
2012ರಲ್ಲಿ ಅಗ್ರ ಸ್ಥಾನದಲ್ಲಿದ್ದ ಅವರು ಎರಡು ಬಾರಿ ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಚಾಂಪಿಯನ್ ಆಗಿದ್ದರು.

ರಫೆಲ್‌ ನಡಾಲ್‌, ರೋಜರ್ ಫೆಡರರ್‌, ನೊವಾಕ್ ಜೊಕೊವಿಚ್‌, ಆ್ಯಂಡಿ ಮರ್ರೆ, ಜುವಾನ್ ಮಾರ್ಟಿನ್‌ ಡೆಲ್ ಪೊಟ್ರೊ ಮತ್ತು ಮರಿನ್ ಸಿಲಿಕ್‌ ಈ ಬಾರಿಯ ಅಮೆರಿಕ ಓಪನ್‌ ಟೂರ್ನಿಯಲ್ಲಿ ಆಡಲಿದ್ದಾರೆ
ಎಂದು ಸ್ಥಳೀಯ ಟೆನಿಸ್ ಫೆಡರೇಷನ್ ತಿಳಿಸಿದೆ.

ಹಾಲಿ ಚಾಂಪಿಯನ್‌ ಸ್ಲಾನೆ ಸ್ಟೀಫನ್ಸ್‌, ಆರು ಬಾರಿಯ ಚಾಂಪಿಯನ್‌ ಸೆರೆನಾ ವಿಲಿಯಮ್ಸ್‌, ಎರಡು ಬಾರಿ ಪ್ರಶಸ್ತಿ ಗೆದ್ದಿದ್ದ ವೀನಸ್ ವಿಲಿಯಮ್ಸ್‌ ಮಾತ್ರವಲ್ಲದೆ ಮರಿಯಾ ಶರಪೋವಾ ಮತ್ತು ಸಮಂತಾ ಸ್ಟಾಸರ್ ಮಹಿಳಾ ವಿಭಾಗದಲ್ಲಿ ಸವಾಲೆಸೆಯವರು ಎಂದು ಫೆಡರೇಷನ್‌ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT