ಬೆಂಗಳೂರು: ಕಳೆದ ಬಾರಿಯ ಚಾಂಪಿಯನ್ ಪ್ರಜ್ಞೇಶ್ ಗುಣೇಶ್ವರನ್ ಮತ್ತು ಮೊದಲ ಆವೃತ್ತಿಯ ಪ್ರಶಸ್ತಿ ವಿಜೇತ ಸುಮಿತ್ ನಗಾಲ್ ಸೋಮವಾರ ಆರಂಭವಾಗಲಿರುವ ಎಟಿಪಿ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ.

ಕಬ್ಬನ್ ಪಾರ್ಕ್‌ನಲ್ಲಿರುವ ರಾಜ್ಯ ಟೆನಿಸ್ ಸಂಸ್ಥೆಯ ಆವರಣದಲ್ಲಿ ಶನಿವಾರ ಸಂಜೆ ಡ್ರಾ ಸಮಾರಂಭ ನಡೆಯಿತು. ಪ್ರಜ್ಞೇಶ್ ಏಳನೇ ಮತ್ತು ಸಮಿತ್ ಎಂಟನೇ ಶ್ರೇಯಾಂಕ ಹೊಂದಿದ್ದಾರೆ. ಮುಕುಂದ್ ಶಶಿಕುಮಾರ್, ಸಾಕೇತ್ ಮೈನೇನಿ, ಸೂರಜ್ ಪ್ರಬೋಧ್ (ಮೈಸೂರು) ಬೈ ಪಡೆದಿರುವ ಭಾರತದ ಇತರ ಆಟಗಾರರು.

ಭಾರತದ ಶಶಿಕುಮಾರ್ ಮುಕುಂದ್, ಸಿದ್ಧಾರ್ಥ್ ರಾವತ್, ಸಾಕೇತ್ ಮೈನೇನಿ ಹಾಗೂ ರಾಮ್‌ಕುಮಾರ್ ರಾಮನಾಥನ್ ನೇರ ಪ್ರವೇಶ ಪಡೆದಿದ್ದರೆ ಪ್ರಜ್ವಲ್ ದೇವ್, ನಿಕಿ ಪೂಣಚ್ಚ, ಆದಿಲ್ ಕಲ್ಯಾಣಪುರ್, ಅರ್ಜುನ್ ಖಾಡೆ ಮತ್ತು ಸೂರಜ್ ಪ್ರಬೋಧ್ ವೈಲ್ಡ್ ಕಾರ್ಡ್ ಪ್ರವೇಶ ಹೊಂದಿದ್ದಾರೆ.

ಒಟ್ಟು 48 ಆಟಗಾರರು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದು ಈ ಪೈಕಿ 40 ಮಂದಿ ನೇರ ಪ್ರವೇಶ ಪಡೆದಿದ್ದಾರೆ. ಐವರಿಗೆ ವೈಲ್ಡ್ ಕಾರ್ಡ್ ದೊರಕಿದ್ದು ಇಬ್ಬರು ಅರ್ಹತಾ ಸುತ್ತಿನಲ್ಲಿ ಆಡಿ ಮುಖ್ಯ ಸುತ್ತು ಪ್ರವೇಶಿಸುವರು.

ಒಬ್ಬರು ವಿಶೇಷ ವಿಭಾಗದಿಂದ ಸ್ಪರ್ಧಿಸಲಿದ್ದಾರೆ.

ಅಗ್ರ 10 ಶ್ರೇಯಾಂಕಿತ ಆಟಗಾರರು: ರಿಚರ್ಡಾಸ್ ಬೆರಂಕಿಸ್ (ಲಿಥುವೇನಿಯ)–1, ಸ್ಟಿಫಾನೊ ಟ್ರವಗ್ಲಿಯ (ಇಟಲಿ)–2, ಯೂಚಿ ಸುಗಿಟಾ (ಜಪಾನ್)–3, ಜೇಮ್ಸ್ ಡಕ್ವರ್ಥ್ (ಆಸ್ಟ್ರೇಲಿಯಾ)–4, ಜೀರಿ ವೆಸ್ಲಿ (ಜೆಕ್ ಗಣರಾಜ್ಯ)–5, ಎವ್ಜೆನಿ ಡಾನ್‌ಸ್ಕೊಯ್ (ರಷ್ಯಾ)-6, ಪ್ರಜ್ಞೇಶ್ ಗುಣೇಶ್ವರನ್ (ಭಾರತ)–7, ಸುಮಿತ್ ನಗಾಲ್ (ಭಾರತ)–8, ಥಾಮಸ್ ಫ್ಯಾಬಿಯಾನೊ (ಇಟಲಿ)–9, ಜೈಜೆನ್ ಜಾಂಗ್ (ಚೀನಾ)–10.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.