ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

US Open: 2ನೇ ಸುತ್ತಿಗೆ ಪ್ರವೇಶಿಸಿದ ಬೋಪಣ್ಣ–ಎಬ್ಡೆನ್ ಜೋಡಿ

Published 30 ಆಗಸ್ಟ್ 2024, 5:53 IST
Last Updated 30 ಆಗಸ್ಟ್ 2024, 5:53 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಟೆನಿಸ್ ತಾರೆ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದೆ.

64 ನಿಮಿಷಗಳ ಆಟದಲ್ಲಿ ನೆದರ್‌ಲ್ಯಾಂಡ್ಸ್‌ನ ಸ್ಯಾಂಡರ್ ಅರೆಂಡ್ಸ್ ಮತ್ತು ರಾಬಿನ್ ಹಾಸೆ ಅವರನ್ನು .6-3, 7-5 ನೇರ ಸೆಟ್‌ಗಳಿಂದ ಈ ಜೋಡಿ ಮಣಿಸಿತು.

ಕಳೆದ ಆವೃತ್ತಿಯ ರನ್ನರ್ ಅಪ್ ಆಗಿರುವ ಇಂಡೋ-ಆಸ್ಟ್ರೇಲಿಯನ್ ಜೋಡಿ ಸತತ ಮೂರು ಸೋಲಿನ ಬಳಿಕ ಈ ಋತುವಿನ ಅಂತಿಮ ಗ್ರ್ಯಾನ್‌ ಸ್ಲಾಮ್‌ಗೆ ಆಗಮಿಸಿದೆ.

ಬೋಪಣ್ಣ ಮತ್ತು ಎಬ್ಡೆನ್ ಜೋಡಿ ಮೂರನೇ ಗೇಮ್‌ನಲ್ಲಿ ತಮ್ಮ ಸರ್ವ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಬಳಿಕ, ಶೀಘ್ರ ಹಿಡಿತ ಸಾಧಿಸಿದ ಜೋಡಿ, ಎರಡು ಬಾರಿ ತಮ್ಮ ಎದುರಾಳಿಗಳ ಸರ್ವ್ ಉರುಳಿಸುವ ಮೂಲಕ ಮುಂದಿನ ನಾಲ್ಕು ಗೇಮ್‌ಗಳನ್ನು ಜಯಿಸಿದರು.

ಎರಡನೇ ಸೆಟ್‌ನಲ್ಲೂ ಆರಂಭಿಕ ಹಿನ್ನಡೆ ಅನುಭವಿಸಿದ ಜೋಡಿ, ಬಳಿಕ ಬೇಗನೆ ಕಮ್‌ಬ್ಯಾಕ್ ಮಾಡಿ 5–5ರಿಂದ ಸಮಬಲ ಸಾಧಿಸಿತು. ಬಳಿಕ, ಎದುರಾಳಿಗಳ ಒಂದು ಸರ್ವ್ ಅನ್ನು ಉರುಳಿಸುವ ಮೂಲಕ ಜಯ ಸಾಧಿಸಿತು.

ಎರಡನೇ ಸುತ್ತಿನಲ್ಲಿ ಶ್ರೇಯಾಂಕ ರಹಿತ ಜೋಡಿ ಸ್ಪೇನ್‌ನ ರಾಬರ್ಟೊ ಕಾರ್ಬಲ್ಸ್ ಬೇನಾ ಮತ್ತು ಅರ್ಜೆಂಟೀನಾದ ಫೆಡೆರಿಕೊ ಕೊರಿಯಾ ಅವರನ್ನು ಬೋಪಣ್ಣ–ಎಬ್ಡೆನ್ ಜೋಡಿ ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT