ಬುಧವಾರ, ಜನವರಿ 29, 2020
28 °C

ಟೆನಿಸ್‌: ಫೈನಲ್‌ಗೆ ಬೋಪಣ್ಣ ಜೋಡಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದೋಹಾ: ಭಾರತದ ರೋಹನ್‌ ಬೋಪಣ್ಣ ಮತ್ತು ನೆದರ್ಲೆಂಡ್ಸ್‌ನ ವೆಸ್ಲಿ ಕೂಲ್‌ಹಪ್‌ ಜೋಡಿ ಕತಾರ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಶುಕ್ರವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಬೋಪಣ್ಣ ಮತ್ತು ವೆಸ್ಲಿ 7–5, 6–2 ನೇರ ಸೆಟ್‌ಗಳಿಂದ ಎರಡನೇ ಶ್ರೇಯಾಂಕದ ಹೆನ್ರಿ ಕೊಂಟಿನೆನ್‌ ಮತ್ತು ಫ್ರಾಂಕೊ ಕುಗೊರ್‌ ಅವರನ್ನು ಪರಾಭವಗೊಳಿಸಿದರು.

ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಬೋಪಣ್ಣ ಮತ್ತು ವೆಸ್ಲಿ ಅವರು ಮೊದಲ ಸೆಟ್‌ನಲ್ಲಿ ಎದುರಾಳಿಗಳಿಂದ ಅಲ್ಪ ಪ್ರತಿರೋಧ ಎದುರಿಸಿದರು. ಆದರೆ ಎರಡನೇ ಸೆಟ್‌ನಲ್ಲಿ ಪಾರಮ್ಯ ಮೆರೆದು ಸುಲಭವಾಗಿ ಪಂದ್ಯ ಗೆದ್ದರು.

ಶನಿವಾರ ನಡೆಯುವ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ರೋಹನ್‌ ಮತ್ತು ವೆಸ್ಲಿ ಅವರು ಲ್ಯೂಕ್‌ ಬ್ಯಾಂಬ್ರಿಡ್ಜ್‌ ಮತ್ತು ಸ್ಯಾಂಟಿಯಾಗೊ ಗೊಂಜಾಲೆಜ್‌ ವಿರುದ್ಧ ಸೆಣಸಲಿದ್ದಾರೆ.

ನಾಲ್ಕರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಲ್ಯೂಕ್‌ ಮತ್ತು ಸ್ಯಾಂಟಿಯಾಗೊ 2–6, 6–2, 10–4ರಲ್ಲಿ ಡೆನ್ಮಾರ್ಕ್‌ನ ಫ್ರೆಡರಿಕ್‌ ನೀಲ್‌ಸನ್‌ ಮತ್ತು ಜರ್ಮನಿಯ ಟಿಮ್‌ ಪುಯೆಟ್ಜ್‌ ಅವರನ್ನು ಸೋಲಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು