ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌ ಟೂರ್ನಿ: ನಿಶಿಕೊರಿಗೆ ಪ್ರಶಸ್ತಿ

Last Updated 6 ಜನವರಿ 2019, 20:15 IST
ಅಕ್ಷರ ಗಾತ್ರ

ಬ್ರಿಸ್ಟೇನ್: ಜಪಾನ್‌ನ ಕೀ ನಿಶಿಕೋರಿಬ್ರಿಸ್ಟೇನ್ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯ ಟ್ರೋಫಿಯನ್ನು ಗೆದ್ದುಕೊಂಡರು. ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ನಿಶಿಕೋರಿ, 6–4, 3–6, 6–2 ರಿಂದ ರಷ್ಯಾದ ಡೇನಿಯಲ್‌ ಮೆಡ್ವೆಡೆವ್‌ ಅವರನ್ನು ಮಣಿಸಿದರು.

2016ರಲ್ಲಿ ನಡೆದಿದ್ದ ಮೆಂಫಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ನಿಶಿಕೋರಿ, 2017ರಲ್ಲಿ ನಡೆದಿದ್ದ ಬ್ರಿಸ್ಟೇನ್ ಇಂಟರ್‌ನ್ಯಾಷನಲ್‌ನಲ್ಲಿ ರನ್ನರ್‌ ಅಪ್‌ ಆಗಿದ್ದರು. ಮಣಿಕಟ್ಟು ಗಾಯದಿಂದಾಗಿ ಕಳೆದ ವರ್ಷ ಟೂರ್ನಿಗಳಿಂದ ಹೊರಗುಳಿದಿದ್ದರು.

ಮೊದಲ ಸೆಟ್‌ನಲ್ಲಿ ಉತ್ತಮವಾಗಿ ಆಟ ಆರಂಭಿಸಿದ ಮೆಡ್ವೆಡರ್‌ ಅವರು 3 ಪಾಯಿಂಟ್‌ಗಳಿಂದ ಮುನ್ನಡೆ ಗಳಿಸಿದ್ದರು. ಪಾಯಿಂಟ್ಸ್‌ ಗಳಿಸುವಲ್ಲಿ ವಿಫಲವಾಗಿದ್ದ ನಿಶಿಕೋರಿ ಎಚ್ಚೆತ್ತುಕೊಂಡು ತಿರುಗೇಟು ನೀಡಿ, 3–3 ಸಮಬಲ ಸಾಧಿಸಿದರು. ಈ ಸೆಣಸಾಟವು 42 ನಿಮಿಷಗಳ ಕಾಲ ನಡೆಯಿತು.

ಎರಡನೇ ಸೆಟ್‌ನಲ್ಲಿ ಮೆಡ್ವಿಡೆವ್‌ ನಿರಾಯಾಸವಾಗಿ ಮುನ್ನಡೆ ಸಾಧಿಸಿದರು. ಎರಡು ಗಂಟೆಗಳ ಕಾಲ ನಡೆದ ನಿರ್ಣಾಯಕ ಸುತ್ತಿನ ಹಣಾಹಣಿಯಲ್ಲಿ ನಿಷಿಕೋರಿ ಗೆಲುವು ಸಾಧಿಸಲು ಸಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT