ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ ಓಪನ್‌: ನಗಾಲ್‌ಗೆ ಪ್ರಶಸ್ತಿ

Published 11 ಫೆಬ್ರುವರಿ 2024, 23:51 IST
Last Updated 11 ಫೆಬ್ರುವರಿ 2024, 23:51 IST
ಅಕ್ಷರ ಗಾತ್ರ

ಚೆನ್ನೈ: ಭಾರತದ ಸುಮಿತ್ ನಗಾಲ್‌ ಅವರು ಚೆನ್ನೈ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಇಟಲಿಯ ಲುಕಾ ನಾರ್ಡಿ ಅವರನ್ನು ಮಣಿಸಿ ಚಾಲೆಂಜರ್ ಮಟ್ಟದ ಐದನೇ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು. ಈ ಸಾಧನೆಯೊಂದಿಗೆ ಅವರು ವೃತ್ತಿಜೀವನದಲ್ಲಿ ಮೊದಲ ಬಾರಿಗೆ ವಿಶ್ವ ರ‍್ಯಾಂಕಿಂಗ್‌ನ ಅಗ್ರ 100ರಲ್ಲಿ ಸ್ಥಾನ ಖಚಿತಪಡಿಸಿಕೊಂಡರು.

ಭಾನುವಾರ ನಡೆದ ಪಂದ್ಯದಲ್ಲಿ ನಗಾಲ್‌ ಅವರು 6–1, 6–4ರಿಂದ ಗೆಲುವು ಸಾಧಿಸಿದರು. ಸೋಮವಾರ ಪ್ರಕಟವಾಗಲಿರುವ ಹೊಸ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಗಾಲ್‌ ಅವರಿಗೆ 98ನೇ ಸ್ಥಾನಕ್ಕೆ ಬಡ್ತಿ ದೊರೆಯಲಿದೆ

2019ರಲ್ಲಿ ಪ್ರಜ್ಞೇಶ್‌ ಗುಣೇಶ್ವರನ್‌ 75ನೇ ರ‍್ಯಾಂಕಿಂಗ್‌ ಪಡೆದಿದ್ದರು. ಅದಾದ ಬಳಿಕ ಅಗ್ರ 100ರಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ನಗಾಲ್‌ ಪಾತ್ರವಾಗಲಿದ್ದಾರೆ.

ಆಸ್ಟ್ರೇಲಿಯನ್ ಓಪನ್‌ನ ಮುಖ್ಯ ಸುತ್ತಿಗೆ ಅರ್ಹತೆ ಪಡೆದಿದ್ದ 26 ವರ್ಷದ ನಗಾಲ್‌, ಮೊದಲ ಸುತ್ತಿನಲ್ಲಿ ಅಲೆಕ್ಸಾಂಡರ್ ಬುಬ್ಲಿಕ್ (23ನೇ ಕ್ರಮಾಂಕ) ಅವರನ್ನು ಸೋಲಿಸಿ ಈ ಋತುವಿನಲ್ಲಿ ಉತ್ತಮ ಆರಂಭ ಪಡೆದಿದ್ದರು. ಅದ್ಭುತ ಫಾರ್ಮ್‌ನಲ್ಲಿರುವ ನಗಾಲ್‌ ಅವರು ಚೆನ್ನೈ ಓಪನ್‌ನಲ್ಲಿ ಯಾವುದೇ ಸೆಟ್‌ಗಳನ್ನು ಕೈಬಿಡದೆ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT