ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯ ಕಾರ್ಯಕ್ಕೆ ಬೆಂಬಲ: ಬಾಲ್ಕನ್ಸ್‌ನಲ್ಲಿ ಟೆನಿಸ್‌

Last Updated 23 ಮೇ 2020, 18:33 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್‌ ಮಹಾಮಾರಿಯ ಹಿನ್ನೆಲೆಯಲ್ಲಿ ವೃತ್ತಿಪರ ಟೆನಿಸ್‌ಸ್ಥಗಿತಗೊಂಡಿದೆ. ಈ ವೇಳೆ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಚ್‌, ಬಾಲ್ಕನ್ಸ್‌‌ ವಲಯದಲ್ಲಿ ಜೂನ್‌ 13ರಿಂದ ಜುಲೈ 5ರವರೆಗೆ ನಿಗದಿಯಾಗಿರುವ ಸರಣಿ ಪಂದ್ಯಗಳಲ್ಲಿ ಪಾಲ್ಗೊಳ್ಳುವಂತೆ ಕೆಲವು ಪ್ರಮುಖ ಆಟಗಾರರಿಗೆ ಆಹ್ವಾನ ನೀಡಿದ್ದಾರೆ.

ಈ ವರ್ಷದ ಮಾರ್ಚ್‌ ಮೊದಲ ವಾರದಿಂದಲೇ ಎಲ್ಲ ಟೂರ್ನಿಗಳು ಸ್ಥಗಿತಗೊಂಡಿದ್ದವು. ವಿಶ್ವದ ಬಹುತೇಕ ಕಡೆಗಳಲ್ಲಿ ಕೊರೊನಾ ನಿಯಂತ್ರಣದ ಸಲುವಾಗಿ ಲಾಕ್‌ಡೌನ್‌ ಜಾರಿಯಲ್ಲಿರುವ ಕಾರಣ ಆಗಸ್ಟ್‌ಗಿಂತ ಮುಂಚೆ ಯಾವ ಟೂರ್ನಿಗಳೂ ಆರಂಭವಾಗುತ್ತಿಲ್ಲ.

‘ಬಾಲ್ಕನ್ಸ್‌ ವಲಯದಲ್ಲಿ ಆ್ಯಡ್ರಿಯಾ ಟೂರ್‌ ಹೆಸರಿನ ಟೂರ್ನಿ ನಡೆಯುವುದನ್ನು ಅಧಿಕೃತವಾಗಿ ಪ್ರಕಟಿಸುತ್ತಿದ್ದೇನೆ. ಬೆಲ್‌ಗ್ರೇಡ್‌ನಲ್ಲಿ ಜೂನ್‌ 13ರಂದು ಟೂರ್ನಿ ಆರಂಭವಾಗಲಿದೆ’ ಎಂದು ಶುಕ್ರವಾರ 33ನೇ ವಸಂತಕ್ಕೆ ಕಾಲಿಟ್ಟ ಜೊಕೊವಿಚ್‌ ಟ್ವೀಟ್‌ ಮಾಡಿದ್ದಾರೆ.

‘ಬಾಲ್ಕನ್ಸ್‌‌ ವಲಯದಲ್ಲಿ ನಡೆಯುತ್ತಿರುವ ಮಾನವೀಯ ಕಾರ್ಯಗಳಿಗೆ ಬೆಂಬಲವಾಗಿ ಈ ಪಂದ್ಯಗಳನ್ನು ನಡೆಸುತ್ತಿದ್ದೇವೆ’ ಎಂದು ಅವರು ನುಡಿದರು.

ವಿಶ್ವದ ಮೂರನೇ ಕ್ರಮಾಂಕದ ಆಟಗಾರ, ಅಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಹಾಗೂ ಬಲ್ಗೇರಿಯಾದ ಗ್ರಿಗೊರ್‌ ಡಿಮಿಟ್ರೊವ್‌ ಅವರು ಟೂರ್ನಿಯಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT