ಬುಧವಾರ, ಮಾರ್ಚ್ 3, 2021
19 °C

ತತ್ವಂ ಜೂನಿಯರ್ ಸರ್ಕೀಟ್‌ ಟೆನಿಸ್ ಟೂರ್ನಿ: ಫಜಲ್, ಮೇಘನಾಗೆ ಅಗ್ರ ಶ್ರೇಯಾಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿ) ಪ್ರತಿಭಾ ಶೋಧ ಟೆನಿಸ್ ಟೂರ್ನಿಯಾದ ತತ್ವಂ ಜೂನಿಯರ್ ಟೂರ್‌ ಸೋಮವಾರ ಇಲ್ಲಿ ಆರಂಭವಾಗಲಿದ್ದು ರಾಜ್ಯದ ಮೇಘನಾ ಜಿ.ಡಿ. ಹಾಗೂ ತಮಿಳುನಾಡಿನ ಮೀರ್ ಫಜಲ್ ಅಲಿ ಅವರು ಕ್ರಮವಾಗಿ ಬಾಲಕಿಯರ ಹಾಗೂ ಬಾಲಕರ ವಿಭಾಗದಲ್ಲಿ ಅಗ್ರಶ್ರೇಯಾಂಕ ಪಡೆದಿದ್ದಾರೆ.

ಆಟಗಾರರಿಗೆ ರಾಷ್ಟ್ರೀಯ ಟೂರ್ನಿಗಳಿಗೆ ರ‍್ಯಾಂಕಿಂಗ್ ಪಾಯಿಂಟ್ಸ್ ಗಳಿಸಿಕೊಳ್ಳುವ ಉದ್ದೇಶದಿಂದ ಕೆಎಸ್‌ಎಲ್‌ಟಿಎ ಸಹಭಾಗಿತ್ವದಲ್ಲಿ ತತ್ವಂ ವೆಂಚರ್ಸ್‌ 12, 14, 16 ವರ್ಷದೊಳಗಿನವರ ಟೂರ್ನಿಗಳನ್ನು ಪ್ರತಿ ತಿಂಗಳು ಆಯೋಜಿಸಲಿದೆ.

ಬಾಲಕರ ವಿಭಾಗದಲ್ಲಿ ಲಿಖಿತ್ ಗೌಡ ಹಾಗೂ ತನಿಶ್ ವೇಪನಪಳ್ಳಿ (ಇಬ್ಬರೂ ಕರ್ನಾಟಕದವರು) ಅವರಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಶ್ರೇಯಾಂಕ ನೀಡಲಾಗಿದೆ. ತೆಲಂಗಾಣದ ಪ್ರಣೀತ್ ಚೆಟ್ಟೆಪು ನಾಲ್ಕನೇ ಶ್ರೇಯಾಂಕ ಪಡೆದಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಕಾಶ್ವಿ ಸುನಿಲ್‌, ತನು ವಿಶ್ವಾಸ್‌ ಹಾಗೂ ಸನಾ ಸೇಶ್‌ ವರಧಮಣಿ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಶ್ರೇಯಾಂಕ ಪಡೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು