'ಕಿಂಗ್ ಆಫ್ ಕ್ಲೇ' ನಡಾಲ್ಗೆ ಅಂತಿಮ 4ರ ಘಟ್ಟದಲ್ಲಿ ಜೊಕೊವಿಚ್ ಸವಾಲು

ಪ್ಯಾರಿಸ್: ಪ್ರತಿಷ್ಠಿತ ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಅಂತಿಮ ನಾಲ್ಕರ ಘಟ್ಟದ ಹೋರಾಟದಲ್ಲಿ 'ಕಿಂಗ್ ಆಫ್ ಕ್ಲೇ' ಕೋರ್ಟ್ ಖ್ಯಾತಿಯ ಸ್ಪೇನ್ನ ರಫೆಲ್ ನಡಾಲ್ ಅವರು ವಿಶ್ವ ನಂ.1 ರ್ಯಾಂಕ್ನ ಸರ್ಬಿಯಾದ ನೊವಾಕ್ ಜೊಕೊವಿಚ್ ಸವಾಲನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ನೊವಾಕ್ ಜೊಕೊವಿಚ್ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಒಂಬತ್ತನೇ ಶ್ರೇಯಾಂಕಿತ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ವಿರುದ್ಧ 6-3 6-2 6-7 (5) 7-5ರ ಅಂತರದಲ್ಲಿ ಗೆಲುವು ದಾಖಲಿಸಿದರು.
ಇದನ್ನೂ ಓದಿ: ಫ್ರೆಂಚ್ ಓಪನ್ನಿಂದ ಹೊರಬಿದ್ದ ರೋಹನ್ ಬೋಪಣ್ಣ, ಭಾರತದ ಹೋರಾಟ ಅಂತ್ಯ
ಹಾಲಿ ಚಾಂಪಿಯನ್, ಮೂರನೇ ಶ್ರೇಯಾಂಕಿತ ನಡಾಲ್, ಅಂತಿಮ ಎಂಟರ ಘಟ್ಟದ ಹೋರಾಟದಲ್ಲಿ ಅರ್ಜೆಂಟೀನಾದ ಡಿಗೊ ಸ್ವಾರ್ಟ್ಜ್ಮನ್ ಎದುರು 6-3, 4-6, 6-4, 6-0ರ ಅಂತರದಲ್ಲಿ ವಿಜಯ ದಾಖಲಿಸಿದ್ದರು.
"This match had it all: falls, crowd, break. It was a lot of intensity"
Catch up on Djokovic's thrilling win that earned him the right to play Nadal in the semi-finals 👇#RolandGarros
— Roland-Garros (@rolandgarros) June 10, 2021
ದಾಖಲೆಯ 13 ಬಾರಿ ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಮ್ ಚಾಂಪಿಯನ್ ನಡಾಲ್ ಹಾಗೂ ಜೊಕೊವಿಚ್ ನಡುವಣ ಪಂದ್ಯವು ಟೆನಿಸ್ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲವನ್ನುಂಟು ಮಾಡಿದೆ. ಅಂದ ಹಾಗೆ ಜೊಕೊವಿಚ್ ಒಂದು ಬಾರಿ ಮಾತ್ರ (2016) ಆವೆ ಮಣ್ಣಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು.
ಮಗದೊಂದು ಸೆಮಿಫೈನಲ್ ಮುಖಾಮುಖಿಯಲ್ಲಿ ಗ್ರೀಸ್ನ 5ನೇ ಶ್ರೇಯಾಂಕಿತ ಸ್ಟೆಫನೊಸ್ ಸಿಸಿಪಸ್ ಅವರು ಜರ್ಮನಿಯ ಆರನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜೆರೆವ್ ಸವಾಲನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ: ಸಕ್ಕರಿ, ಬಾರ್ಬೊರಾಗೆ ಚೊಚ್ಚಲ ಸೆಮಿಫೈನಲ್
ಕ್ಲೇ ಕೋರ್ಟ್ನಲ್ಲಿ 105-2 ಗೆಲುವು-ಸೋಲಿನ ಅಂತರವನ್ನು ಕಾಪಾಡಿಕೊಂಡಿರುವ ನಡಾಲ್ ಮಣಿಸುವುದು ಜೊಕೊವಿಚ್ ಪಾಲಿಗೆ ಅಷ್ಟು ಸುಲಭವಲ್ಲ. ಕಳೆದ ವರ್ಷವೂ ಜೊಕೊವಿಕ್ ಅವರನ್ನೇ ಮಣಿಸಿದ್ದ ನಡಾಲ್ 20ನೇ ಗ್ರ್ಯಾನ್ಸ್ಲಾಮ್ ಗೆದ್ದ ಸಾಧನೆ ಮಾಡಿದ್ದರು.
“Of course, the numbers are just amazing, no?"
While @rafaelnadal is thinking about his 14th semi-final at #RolandGarros, let's take a moment to let another entertaining performance digest. Quotes, stats & more 👇
— Roland-Garros (@rolandgarros) June 10, 2021
ಟೂರ್ನಿಯಿಂದ ಅರ್ಧದಿಂದಲೇ ಹಿಂಜರಿದಿರುವ ರೋಜರ್ ಫೆಡರರ್ ಜೊತೆಗೆ 20 ಗ್ರ್ಯಾನ್ಸ್ಲಾಮ್ ಪ್ರಶಸ್ತಿ ದಾಖಲೆಯನ್ನು ಹಂಚಿಕೊಂಡಿರುವ ನಡಾಲ್ ಈಗ ದಾಖಲೆಯ 21ನೇ ಕಿರೀಟದ ಹುಡುಕಾಟದಲ್ಲಿದ್ದಾರೆ. ತಮ್ಮ ಮೆಚ್ಚಿನ ಕ್ಲೇ ಕೋರ್ಟ್ನಲ್ಲೇ ಈ ದಾಖಲೆ ತಲುಪುವ ಇರಾದೆಯಲ್ಲಿದ್ದಾರೆ. ಅತ್ತ ಜೊಕೊವಿಕ್ 19ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.