ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ರೆಂಚ್‌ ಓಪನ್‌: ನಗಾಲ್‌ಗೆ ಪ್ರಬಲ ಎದುರಾಳಿ

Published 24 ಮೇ 2024, 22:30 IST
Last Updated 24 ಮೇ 2024, 22:30 IST
ಅಕ್ಷರ ಗಾತ್ರ

ಪ್ಯಾರಿಸ್‌: ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಅವರಿಗೆ ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಪ್ರಬಲ ಸವಾಲು ಎದುರಾಗಿದೆ. ಅವರು ಆರಂಭದ ಪಂದ್ಯವನ್ನು ವಿಶ್ವ ಕ್ರಮಾಂಕದಲ್ಲಿ 18ನೇ ಸ್ಥಾನದಲ್ಲಿರುವ ರಷ್ಯಾದ ಆಟಗಾರ ಕರೆನ್‌ ಕಚನೋವ್ ಎದುರು ಭಾನುವಾರ ಆಡಬೇಕಾಗಿದೆ.

ವಿಶ್ವ ಕ್ರಮಾಂಕದಲ್ಲಿ 94ನೇ ಸ್ಥಾನದಲ್ಲಿರುವ ನಗಾಲ್, ಎಟಿಪಿ ಪ್ರವಾಸದಲ್ಲಿ ಸ್ಥಿರ ಪ್ರದರ್ಶನದ ಕಾರಣ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗೆ ನೇರ ಪ್ರವೇಶ ಪಡೆದಿದ್ದಾರೆ. 2019ರಲ್ಲಿ ಪ್ರಜ್ಞೇಶ್‌ ಗುಣೇಶ್ವರನ್‌ ನಂತರ ಫ್ರೆಂಚ್‌ ಓಪನ್‌ ಪ್ರಧಾನ ‘ಡ್ರಾ’ಕ್ಕೆ ನೇರ ಪ್ರವೇಶ ಪಡೆದ ಭಾರತದ ಮೊದಲ ಪುರುಷ ಆಟಗಾರ ಎನಿಸಿದ್ದಾರೆ ನಗಾಲ್.

ಕ್ಲೇ ಅಂಕಣದಲ್ಲಿ 26 ವರ್ಷ ವಯಸ್ಸಿನ ಈ ಆಟಗಾರನ ಪ್ರದರ್ಶನ ಅತ್ಯುತ್ತಮ ಮಟ್ಟದಲ್ಲಿಲ್ಲ. ಮಾಂಟೆಕಾರ್ಲೊ ಮಾಸ್ಟರ್ಸ್‌ ಟೂರ್ನಿಯಲ್ಲಿ ಮೂರನೇ ಸುತ್ತಿನಲ್ಲಿ ಅವರು ಹೋಲ್ಗರ್ ರೂನ್ ಅವರಿಗೆ ಸೋತಿದ್ದರು. ಮ್ಯಾಡ್ರಿಡ್ ಮತ್ತು ರೋಮ್ ಮಾಸ್ಟರ್ಸ್‌ನಲ್ಲಿ ಆಡಿರಲಿಲ್ಲ.

ಕಚನೋವ್, ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಕಳೆದ ವರ್ಷ ಎಂಟರ ಘಟ್ಟ ತಲುಪಿದ್ದರು. ಫೆಬ್ರುವರಿಯಲ್ಲಿ ನಡೆದ ಕತಾರ್‌ ಓಪನ್ ಟೂರ್ನಿಯಲ್ಲಿ ವಿಜೇತರಾಗಿದ್ದರು. ಈ ವರ್ಷ ಅವರ ಜಯ–ಅಪಜಯದ ದಾಖಲೆ 21–7 ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT