ಪ್ಯಾರಿಸ್: ಹಾಲಿ ಚಾಂಪಿಯನ್ನರಾದ ಕಾರ್ಲೋಸ್ ಅಲ್ಕರಾಜ್ ಮತ್ತು ಇಗಾ ಶ್ವಾಂಟೆಕ್ ಸೋಮವಾರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ನಲ್ಲಿ ನೇರ ಸೆಟ್ಗಳ ಗೆಲುವಿನೊಡನೆ ಎರಡನೇ ಸುತ್ತು ಪ್ರವೇಶಿಸಿದರು.

ಸ್ಪೇನ್ನ ತಾರೆ ಅಲ್ಕರಾಜ್ 6-3, 6-4, 6-2ರಿಂದ ಇಟಲಿಯ ಕ್ವಾಲಿಫೈಯರ್ ಆಟಗಾರ ಗಿಯುಲಿಯೊ ಜೆಪ್ಪಿಯೇರಿ ಅವರನ್ನು ಹಿಮ್ಮೆಟ್ಟಿಸಿ, ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭಿಯಾನ ಆರಂಭಿಸಿದರು. ಎರಡನೇ ಶ್ರೇಯಾಂಕದ ಅಲ್ಕರಾಜ್ ಮುಂದಿನ ಸುತ್ತಿನಲ್ಲಿ ಹಂಗೇರಿಯ ಫ್ಯಾಬಿಯನ್ ಮರೋಜ್ಸನ್ ಅವರನ್ನು ಎದುರಿಸುವರು.

ರೋಲ್ಯಾಂಡ್ ಗ್ಯಾರೋಸ್ನ ಸುಝಾನ್ ಲೆಂಗ್ಲೆನ್ ಕೋರ್ಟ್ನಲ್ಲಿ ನಡೆದ ಹಣಾಹಣಿಯಲ್ಲಿ ವಿಶ್ವದ 310ನೇ ಕ್ರಮಾಂಕದ ಆಟಗಾರನನ್ನು ಸೋಲಿಸಲು 22 ವರ್ಷ ವಯಸ್ಸಿನ ಅಲ್ಕರಾಜ್ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

ಪ್ರಸಕ್ತ ಋತುವಿನ ಮಾಂಟೆ ಕಾರ್ಲೊ ಮಾಸ್ಟರ್ಸ್ ಮತ್ತು ಇಟಾಲಿಯನ್ ಓಪನ್ ಟ್ರೋಫಿಗಳನ್ನು ಆವೆ ಮಣ್ಣಿನ ಮೇಲೆ ಗೆದ್ದಿರುವ ಅಲ್ಕರಾಜ್ ಇಲ್ಲೂ ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರನಾಗಿದ್ದಾರೆ. ಅವರು ಐದನೇ ಗ್ರ್ಯಾನ್ಸ್ಲಾಮ್ ಕಿರೀಟದ ನಿರೀಕ್ಷೆಯಲ್ಲಿದ್ದಾರೆ.

ಟೇಲರ್ಗೆ ಆಘಾತ: ಅಮೆರಿಕದ ಟೇಲರ್ ಫ್ರಿಟ್ಜ್ ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು. ಶ್ರೇಯಾಂಕ ರಹಿತ ಜರ್ಮನಿಯ ಡೇನಿಯಲ್ ಆಲ್ಟ್ಮೇಯರ್ 7-5, 3-6, 6-3, 6-1ರಿಂದ ನಾಲ್ಕನೇ ಶ್ರೇಯಾಂಕದ ಟೇಲರ್ ಅವರಿಗೆ ಆಘಾತ ನೀಡಿದರು.

ಏಳನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್ (ನಾರ್ವೆ) 6-3, 6-4, 6-2ರಿಂದ ಆಲ್ಬರ್ಟ್ ರಾಮೋಸ್ ವಿನೋಲಾಸ್ (ಸ್ಪೇನ್) ವಿರುದ್ಧ ನಿರಾಯಾಸವಾಗಿ ಗೆದ್ದರು. 13ನೇ ಶ್ರೇಯಾಂಕದ ಬೆನ್ ಶೆಲ್ಟನ್ (ಅಮೆರಿಕ) 6–4, 4–6, 3–6, 6–2, 6–3ರಿಂದ ಲೊರೆಂಜೊ ಸೊನೆಗೊ (ಇಟಲಿ) ಅವರನ್ನು ಮಣಿಸಿದರು.

ಶ್ವಾಂಟೆಕ್ ಶುಭಾರಂಭ: ಪೋಲೆಂಡ್ನ ತಾರೆ 23 ವರ್ಷ ವಯಸ್ಸಿನ ಶ್ವಾಂಟೆಕ್ ಆರಂಭಿಕ ಸುತ್ತಿನಲ್ಲಿ 6-3, 6-3ರಿಂದ ಸ್ಲೊವಾಕಿಯಾದ ರೆಬೆಕಾ ಸ್ರಾಮ್ಕೋವಾ ಅವರನ್ನು ಮಣಿಸಿದರು.

ನಾಲ್ಕು ಬಾರಿಯ ಚಾಂಪಿಯನ್ ಶ್ವಾಂಟೆಕ್ ಹಾಲಿ ಋತುವಿನಲ್ಲಿ ಲಯಕ್ಕೆ ಪರದಾಡುತ್ತಿದ್ದು, ವಿಶ್ವ ರ್ಯಾಂಕಿಂಗ್ನಲ್ಲಿ ಐದನೇ ಸ್ಥಾನಕ್ಕೆ ಇಳಿದಿದ್ದಾರೆ. ಅವರಿಗೆ ಮುಂದಿನ ಸುತ್ತಿನಲ್ಲಿ ಅಮೆರಿಕ ಓಪನ್ ಮಾಜಿ ಚಾಂಪಿಯನ್ ಎಮ್ಮಾ ರಾಡುಕಾನು ಎದುರಾಳಿಯಾಗಿದ್ದಾರೆ.

ಎರಡು ದಿನಗಳ ಹಿಂದೆ ಸ್ಟ್ರಾಸ್ಬರ್ಗ್ನಲ್ಲಿ ಡಬ್ಲ್ಯುಟಿಎ ಪ್ರಶಸ್ತಿ ಗೆದ್ದು ಬಂದಿರುವ ವಿಂಬಲ್ಡನ್ ಮಾಜಿ ಚಾಂಪಿಯನ್, ಕಜಕಸ್ತಾನದ ಎಲೆನಾ ರಿಬಾಕಿನಾ 6-1, 4-6, 6-4ರಿಂದ ಅರ್ಜೆಂಟೀನಾದ ಜೂಲಿಯಾ ರೀರಾ ಅವರನ್ನು ಸೋಲಿಸಿ ಎರಡನೇ ಸುತ್ತಿಗೆ ಮುನ್ನಡೆದರು. 12ನೇ ಶ್ರೇಯಾಂಕದ ರಿಬಾಕಿನಾ ಅವರಿಗೆ ಅಮೆರಿಕದ ಇವಾ ಜೊವಿಕ್ ಮುಂದಿನ ಎದುರಾಳಿ.

ಒಸಾಕಾಗೆ ನಿರಾಸೆ:

ನಾಲ್ಕು ಗ್ರ್ಯಾನ್ಸ್ಲಾಮ್ ಕಿರೀಟಗಳ ಒಡತಿ ನವೋಮಿ ಒಸಾಕಾ ಮೊದಲ ಸುತ್ತಿನಲ್ಲೇ ಹೊರಬಿದ್ದರು. 10ನೇ ಶ್ರೇಯಾಂಕದ ಪೌಲಾ ಬಡೋಸಾ (ಸ್ಪೇನ್) 6-7 (1/7), 6-1, 6-4ರಿಂದ ಜಪಾನ್ ಆಟಗಾರ್ತಿಯನ್ನು ಸದೆಬಡಿದರು.

ಒಂಬತ್ತನೇ ಶ್ರೇಯಾಂಕದ ಎಮ್ಮಾ ನವರೊ ಮೊದಲ ಸುತ್ತಿನಲ್ಲೇ ಅಭಿಯಾನ ಮುಗಿಸಿದರು. ಸ್ಪೇನ್ನ ಜೆಸ್ಸಿಕಾ ಬೆಜೋಸ್ ಮನೇರಿಯೊ 6-0, 6-1ರಿಂದ ನಿರಾಯಾಸವಾಗಿ ಅಮೆರಿಕದ ಆಟಗಾರ್ತಿಯನ್ನು ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.