ಭಾನುವಾರ, ಜೂನ್ 7, 2020
24 °C

ಖಾಲಿ ಕ್ರೀಡಾಂಗಣದಲ್ಲಿ ಫ್ರೆಂಚ್‌ ಓಪನ್‌?

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್: ‘ಕೊರೊನಾ ಬಿಕ್ಕಟ್ಟು ಹೀಗೆ ಮುಂದುವರಿದರೆ ಈ ಬಾರಿಯ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸುವುದು ಅನಿವಾರ್ಯವಾಗಬಹುದು’ ಎಂದು ಫ್ರೆಂಚ್‌ ಟೆನಿಸ್‌ ಫೆಡರೇಷನ್‌ನ (ಎಫ್‌ಎಫ್‌ಟಿ) ಅಧ್ಯಕ್ಷ ಬರ್ನಾರ್ಡ್‌ ಗುಯಿಡಿಸೆಲ್ಲಿ, ಭಾನುವಾರ ತಿಳಿಸಿದ್ದಾರೆ.

ಈ ಬಾರಿಯ ಟೂರ್ನಿಯು ಮೇ 24ರಿಂದ ಜೂನ್‌ 7ರವರೆಗೆ ನಡೆಯಬೇಕಿತ್ತು. ಕೋವಿಡ್‌–19 ಪಿಡುಗಿನ ಭೀತಿಯಿಂದಾಗಿ ಟೂರ್ನಿಯನ್ನು ಸೆಪ್ಟೆಂಬರ್‌ 20ರಿಂದ ಅಕ್ಟೋಬರ್‌ 4ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.

‘ಲಕ್ಷಾಂತರ ಮಂದಿ ಟೂರ್ನಿ ನಡೆಯುವುದನ್ನು ಎದುರು ನೋಡುತ್ತಿದ್ದಾರೆ. ಖಾಲಿ ಕ್ರೀಡಾಂಗಣದಲ್ಲಾದರೂ ಸರಿಯೇ ಟೂರ್ನಿ ಆಯೋಜಿಸುತ್ತೇವೆ. ಆಗ ಟಿ.ವಿ.ಹಕ್ಕುಗಳಿಂದಾದರೂ ಒಂದಷ್ಟು ಆದಾಯ ಬರುತ್ತದೆ. ಅದನ್ನೂ ಕಳೆದುಕೊಳ್ಳಲು ನಾವು ಸಿದ್ಧರಿಲ್ಲ’ ಎಂದಿದ್ದಾರೆ.

ಕೊರೊನಾ ಬಿಕ್ಕಟ್ಟಿನ ಕಾರಣ ಹಲವು ಟೂರ್ನಿಗಳು ರದ್ದಾಗಿವೆ. ಪ್ರತಿಷ್ಠಿತ ಅಮೆರಿಕ ಓಪನ್‌ ಟೂರ್ನಿಯನ್ನು ಆಗಸ್ಟ್‌ 31ರಿಂದ ಸೆಪ್ಟೆಂಬರ್‌ 13ರವರೆಗೆ ನ್ಯೂಯಾರ್ಕ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಕೊರೊನಾ ಉಪಟಳ ಹೆಚ್ಚುತ್ತಿರುವ ಕಾರಣ ಈ ಟೂರ್ನಿಯನ್ನೂ ಮುಂದೂಡುವ ಸಾಧ್ಯತೆ ಇದೆ. ಈ ಸಂಬಂಧ ಆಯೋಜಕರು ಜೂನ್‌ ಮಧ್ಯಂತರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು