ಶನಿವಾರ, ಜುಲೈ 2, 2022
23 °C
ಇಗಾ ಸ್ವಾಟೆಕ್‌ ಮಹಿಳಾ ವಿಭಾಗದ ಚಾಂಪಿಯನ್

ಇಂಡಿಯನ್ ವೆಲ್ಸ್ ಟೆನಿಸ್: ನಡಾಲ್ ನಾಗಾಲೋಟಕ್ಕೆ ಫ್ರಿಟ್ಸ್‌ ಬ್ರೇಕ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಇಂಡಿಯನ್ ವೆಲ್ಸ್‌, ಅಮೆರಿಕ: ಪಿಎನ್‌ಬಿ ಪರಿಬಾಸ್ ಓಪನ್‌ ಟೆನಿಸ್ ಟೂರ್ನಿಯ ಫೈನಲ್‌ ಪಂದ್ಯಕ್ಕೆ ಕೆಲವೇ ತಾಸುಗಳು ಇರುವಾಗ ಅಮೆರಿಕದ ಟೇಲರ್ ಫ್ರಿಟ್ಸ್‌ ಸಂಕಟಕ್ಕೆ ಸಿಲುಕಿದ್ದರು. ಒಂದು ಹಂತದಲ್ಲಿ ಪಂದ್ಯದಿಂದ ಹಿಂದೆ ಸರಿಯುವ ನಿರ್ಧಾರಕ್ಕೂ ಬಂದಿದ್ದರು.

ಒಂದೆಡೆ ಹಿಮ್ಮಡಿಯಲ್ಲಿ ಕಾಣಿಸಿಕೊಂಡ ತೀವ್ರ ನೋವು, ಮತ್ತೊಂದು ಕಡೆ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ರಫೆಲ್ ನಡಾಲ್ ಎದುರಾಳಿ. ಇದು ಅವರ ನಿರ್ಧಾರಕ್ಕೆ ಪ್ರಮುಖ ಕಾರಣ. ಆಡದಿರುವುದೇ ಒಳಿತು ಎಂದು ಕೋಚ್ ಸಲಹೆ ನೀಡಿದರು. ಆದರೆ ಹೋರಾಡಿಯೇ ತೀರುವೆ ಎಂದೆನಿಸಿ ಫ್ರಿಟ್ಸ್ ಆಡಿದರು.

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ರಫೆಲ್ ನಡಾಲ್ ಅವರನ್ನು 6-3 7-6 (5)ರಲ್ಲಿ ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಈ ಮೂಲಕ ನಡಾಲ್ ಅವರ ಈ ವರ್ಷದ ಅಜೇಯ ಓಟಕ್ಕೆ ಬ್ರೇಕ್ ಹಾಕಿದರು. ಸತತ 20 ಪಂದ್ಯಗಳನ್ನು ಗೆದ್ದು ನಾಗಾಲೋಟದಲ್ಲಿದ್ದ ನಡಾಲ್ ನಿರಾಸೆ ಅನುಭವಿಸಿದರು.

ಆ್ಯಂಡ್ರೆ ರುಬ್ಲೆವ್ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ ಫ್ರಿಟ್ಸ್‌ ಅವರ ಹಿಮ್ಮಡಿ ಉಳುಕಿತ್ತು. ಪಟ್ಟಿಯೊಂದನ್ನು ಸುತ್ತಿಕೊಂಡು ಅವರು ಫೈನಲ್‌ನಲ್ಲಿ ಸೆಣಸಿದ್ದರು. ನಡಾಲ್ ಕೂಡ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸೆಮಿಫೈನಲ್‌ನಲ್ಲಿ ಅವರು ಉಸಿರಾಟದ ತೊಂದರೆ ಅನುಭವಿಸಿದ್ದರು. ಫೈನಲ್‌ನಲ್ಲಿ ಎರಡು ಬಾರಿ ಚಿಕಿತ್ಸೆ ಪಡೆದುಕೊಂಡಿದ್ದರು.

ಇಗಾ ಸ್ವಾಟೆಕ್‌ಗೆ ಪ್ರಶಸ್ತಿ: ಮಹಿಳೆಯರ ವಿಭಾಗದಲ್ಲಿ ಪೋಲೆಂಡ್‌ನ ಇಗಾ ಸ್ವಾಟೆಕ್ 6-4, 6-1ರಲ್ಲಿ ಗ್ರೀಸ್‌ನ ಮರಿಯಾ ಸಕ್ಕರಿ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡರು. ಮರಿಯಾ ತಪ್ಪುಗಳನ್ನು ಎಸಗುತ್ತ ಪಾಯಿಂಟ್‌ಗಳನ್ನು ಕಳೆದುಕೊಂಡರು. ಹೀಗಾಗಿ ಇಗಾ ಸ್ವಾಟೆಕ್ ಅವರ ಹಾದಿ ಸುಗಮವಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು