ಗುರುವಾರ , ಏಪ್ರಿಲ್ 15, 2021
24 °C

ಗಾರ್ಸಿಯಾಗೆ ಪ್ರಶಸ್ತಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನಾಟಿಂಗಂ: ಫ್ರಾನ್ಸ್‌ನ ಕರೋಲಿನ್ ಗಾರ್ಸಿಯಾ ಅವರು ನಾಟಿಂಗಂ ಟೆನಿಸ್‌ ಪ್ರಶಸ್ತಿಯನ್ನು ಜಯಿಸಿದರು.

ಭಾನುವಾರ ರಾತ್ರಿ ನಡೆದ ಫೈನಲ್‌ ಪಂದ್ಯದಲ್ಲಿ ಡೊನ್ನಾ ವೆಕಿಕ್‌ ಅವರನ್ನು 2–6, 7–6 (7/4), 7–6 (7/4) ಸೆಟ್‌ಗಳಿಂದ ಮಣಿಸಿದ ಅವರು 2019ರಲ್ಲಿ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಸೆಮಿಫೈನಲ್‌ನಲ್ಲಿ ಅಮೆರಿಕಾದ ಜೆನ್ನಿಫರ್‌ ಬ್ರಾಡಿ ಅವರನ್ನು 4–6, 6–3, 6–3ರಿಂದ ಗಾರ್ಸಿಯಾ ಸೋಲಿಸಿದ್ದರು. ಪ್ರಬಲ ಪೈಪೋಟಿ ಕಂಡುಬಂದ ಫೈನಲ್‌ ಪಂದ್ಯದಲ್ಲಿ ವೆಕಿಕ್‌ ಮೊದಲ ಸೆಟ್‌ ಗೆದ್ದು ಬೀಗಿದರು.

ಟೈಬ್ರೇಕ್‌ವರೆಗೂ ಸಾಗಿದ ಎರಡನೇ ಸೆಟ್‌ನಲ್ಲಿ ಗಾರ್ಸಿಯಾ ತಿರುಗೇಟು ನೀಡಿದರು. ಮೂರನೇ ಸೆಟ್‌ ಕೂಡ ಟೈಬ್ರೇಕ್‌ ತಲುಪಿತು.

ಆದರೆ ಈ ಸೆಟ್‌ನಲ್ಲೂ ವಿಜೇತ ಆಟಗಾರ್ತಿ ಪ್ರಾಬಲ್ಯ ಮೆರೆದರು. ಭಾರೀ ಪೈಪೋಟಿ ನೀಡಿ ಜಯದ ತೋರಣ ಕಟ್ಟಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು