ಭಾನುವಾರ, ಏಪ್ರಿಲ್ 11, 2021
27 °C
ಮೆಕ್ಸಿಕೊದಲ್ಲಿ ಎಟಿಪಿಯಲ್ಲಿ ಕಣಕ್ಕಿಳಿಯಲಿರುವ ರೋಹನ್ ಬೋಪಣ್ಣ–ಐಸಾಮ್ ಉಲ್ ಹಕ್

ಮತ್ತೆ ಜೊತೆಗೂಡಿದ ’ಇಂಡೊ–ಪಾಕ್ ಎಕ್ಸ್‌ಪ್ರೆಸ್‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಆರು ವರ್ಷಗಳ ನಂತರ ಭಾರತದ ಟೆನಿಸ್ ಪಟು ರೋಹನ್ ಬೋಪಣ್ಣ ಮತ್ತು ಪಾಕಿಸ್ತಾನದ ಐಸಾಮ್ ಉಲ್ ಹಕ್ ಜೊತೆಗೂಡಿ ಕಣಕ್ಕಿಳಿಯಲಿದ್ದಾರೆ.

ಟೆನಿಸ್‌ ನಲ್ಲಿ ಇಂಡೋ–ಪಾಕ್ ಎಕ್ಸ್‌ಪ್ರೆಸ್ ಎಂದೇ ಈ ಜೋಡಿ ಖ್ಯಾತವಾಗಿದೆ. ಇದೇ 15ರಿಂದ ಮೆಕ್ಸಿಕೊದಲ್ಲಿ ನಡೆಯಲಿರುವ ಅಕಾಪುಲ್ಕೊ ಎಟಿಪಿ 500 ಟೂರ್ನಿಯಲ್ಲಿ ಆಡಲಿದ್ದಾರೆ.

2014ರಲ್ಲಿ ಈ ಜೋಡಿಯು ಶೇನಜಾನ್‌ನಲ್ಲಿ ನಡೆದಿದ್ದ ಎಟಿಪಿ 250 ಟೂರ್ನಿಯಲ್ಲಿ ಆಡಿತ್ತು. 2010ರಲ್ಲಿ ಬೋಪಣ್ಣ ಮತ್ತು ಹಕ್ ಅವರು ಅಮೆರಿಕ ಓಪನ್ ಡಬಲ್ಸ್‌ ಫೈನಲ್ ಪ್ರವೇಶಿಸಿದ್ದರು. ಬ್ರಯನ್ ಸಹೋದರರ ಮುಂದೆ ಸೋತಿದ್ದರು. ಆ ಸಂದರ್ಭದಲ್ಲಿ ಬೋಪಣ್ಣ–ಹಕ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿದ್ದರು.

2012ರಲ್ಲಿ ಲಂಡನ್ ಒಲಿಂಪಿಕ್ಸ್‌ ನಲ್ಲಿ ಆಡುವ ಸಿದ್ಧತೆಗಾಗಿ ಬೋಪಣ್ಣ ಅವರು ಭಾರತದವರೇ ಆದ ಮಹೇಶ್ ಭೂಪತಿಯವರೊಂದಿಗೆ ಜೊತೆಯಾದರು. ಈ ಹಂತದಲ್ಲಿ ಹಕ್ ಅವರೊಂದಿಗೆ ಪಾಲುದಾರಿಕೆ ಮುರಿಯಿತು. ಅದಾಗಿ ಎರಡು ವರ್ಷಗಳ ನಂತರ ಮತ್ತೆ ಜೊತೆಗೂಡಿದರು.  ಈಗ ಇಬ್ಬರಿಗೂ 40 ವರ್ಷ ವಯಸ್ಸು. 

’ಆಸ್ಟ್ರೇಲಿಯಾದಲ್ಲಿ ಇಬ್ಬರೂ ಬಹಳ ಸಮಯ ಜೊತೆಗೆ ಇದ್ದೇವು. ಬಹಳಷ್ಟು ಸಮಾಲೋಚನೆ ಮಾಡಿದೆವು. ಅವರಿಗೂ ಡಬಲ್ಸ್‌ ಜೊತೆಗಾರನ ಅವಶ್ಯಕತೆ ಇತ್ತು. ನನಗೂ ಅಗತ್ಯವಿತ್ತು. ಆದ್ದರಿಂದ ಜೊತೆಗೂಡಿದೆವು‘ ಎಂದು ಐಸಾಮ್ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು