ಗುರುವಾರ , ಜೂಲೈ 9, 2020
28 °C

ಕೆಳ ಕ್ರಮಾಂಕದ ಆಟಗಾರರಿಗೆ ಐಟಿಎಫ್‌ ಧನಸಹಾಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌), ಕೊರೊನಾ ಪಿಡುಗಿನ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ನೀಡುತ್ತಿರುವ ಧನಸಹಾಯವನ್ನು ಕೆಳ ಕ್ರಮಾಂಕದ ಆಟಗಾರರಿಗೂ ವಿಸ್ತರಿಸಲು ನಿರ್ಧರಿಸಿದೆ. ಸಿಂಗಲ್ಸ್‌ ಹಾಗೂ ಡಬಲ್ಸ್‌ ಆಟಗಾರರಿಗೆ ಅವರ ದೇಶಗಳ ರಾಷ್ಟ್ರೀಯ ಫೆಡರೇಷನ್‌ಗಳ ಮೂಲಕ ಈ ನೆರವು ಲಭಿಸಲಿದೆ.

ಎಟಿಪಿ, ಡಬ್ಲ್ಯುಟಿಎ, ಗ್ರ್ಯಾನ್‌ಸ್ಲಾಮ್‌ ಆಯೋಜಿಸುವ ದೇಶಗಳು (ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಹಾಗೂ ಫ್ರಾನ್ಸ್‌) ಹಾಗೂ ನೊವಾಕ್‌ ಜೊಕೊವಿಚ್‌ ನೇತೃತ್ವದ ಪ್ರಮುಖ ಆಟಗಾರರು, 800 ಆಟಗಾರರಿಗೆ ಹಂಚುವ ಉದ್ದೇಶದಿಂದ ₹ 45 ಕೋಟಿಗಿಂತ ಅಧಿಕ ಹಣ ಸಂಗ್ರಹಿಸಿದ್ದಾರೆ.

‘ವಿಶ್ವ ಸಿಂಗಲ್ಸ್‌ ಕ್ರಮಾಂಕದಲ್ಲಿ 500 ರಿಂದ 700ರ ಒಳಗಿನ ಸ್ಥಾನದಲ್ಲಿರುವ ಮತ್ತು 175ರಿಂದ 300ರ ಒಳಗಿನ ಕ್ರಮಾಂಕ ಹೊಂದಿರುವ ಪುರುಷ ಹಾಗೂ ಮಹಿಳಾ ಪಟುಗಳಿಗೆ ಐಟಿಎಫ್‌ ನೆರವು ನೀಡಲಿದೆ. ಇದೇನೂ ದೊಡ್ಡ ಮೊತ್ತವಲ್ಲ. ಪ್ರತಿ ಆಟಗಾರರಿಗೆ ಕನಿಷ್ಠ ಒಂದೂವರೆ ಲಕ್ಷ ರೂಪಾಯಿ ದೊರೆಯಲಿದೆ’ ಎಂದು ಐಟಿಎಫ್‌ ಮೂಲಗಳು ಹೇಳಿವೆ.

ಭಾರತದ ಗರಿಷ್ಠ 12 ಟೆನಿಸ್‌ ಪಟುಗಳಿಗೆ (ಮಹಿಳಾ ಮತ್ತು ಪುರುಷ) ಈ ಸಹಾಯ ಲಭಿಸುವ ಸಾಧ್ಯತೆಯಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು