ಪರುಗ್ವೆ: ‘ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸುವ ಬದಲು ಗ್ರ್ಯಾನ್ಸ್ಲಾಮ್ ಟೂರ್ನಿಗಳನ್ನು ರದ್ದು ಮಾಡುವುದೇ ಉತ್ತಮ’ ಎಂದು ಜೆಕ್ ಗಣರಾಜ್ಯದ ಟೆನಿಸ್ ಆಟಗಾರ್ತಿ ಪೆಟ್ರಾ ಕ್ವಿಟೋವಾ ಅಭಿಪ್ರಾಯಪಟ್ಟಿದ್ದಾರೆ.

ಖಾಲಿ ಅಂಗಳದಲ್ಲಿ ಪಂದ್ಯಗಳನ್ನು ನಡೆಸುವ ಯೋಜನೆಗೆ ನನ್ನ ವಿರೋಧವಿದೆ ಎಂದು ಸ್ವಿಟ್ಜರ್ಲೆಂಡ್ನ ಆಟಗಾರ ರೋಜರ್ ಫೆಡರರ್ ಹೋದ ವಾರ ಹೇಳಿದ್ದರು. ಇದಕ್ಕೆ ಕ್ವಿಟೋವಾ ಕೂಡ ಧ್ವನಿಗೂಡಿಸಿದ್ದಾರೆ.

‘ನನಗೀಗ 30 ವರ್ಷ ವಯಸ್ಸು. ಇನ್ನೊಂದು ಗ್ರ್ಯಾನ್ಸ್ಲಾಮ್ನಲ್ಲಿ ಆಡುವ ಆಸೆ ಖಂಡಿತ ಇದೆ. ಅದು ಖಾಲಿ ಕ್ರೀಡಾಂಗಣದಲ್ಲಿ ನಡೆದರೆ ಅದಕ್ಕೆ ನನ್ನ ಸಹಮತವಿಲ್ಲ’ ಎಂದು 30 ವರ್ಷ ವಯಸ್ಸಿನ ಆಟಗಾರ್ತಿ ನುಡಿದಿದ್ದಾರೆ.

‘ಗ್ರ್ಯಾನ್ಸ್ಲಾಮ್ನಲ್ಲಿ ಆಡುವುದು ಹೆಮ್ಮೆಯ ವಿಷಯ. ಅಭಿಮಾನಿಗಳು ನಮ್ಮ ಪಾಲಿಗೆ ಎಂಜಿನ್ ಇದ್ದ ಹಾಗೆ. ಅವರಿಗೆ ಕ್ರೀಡಾಂಗಣ ಪ್ರವೇಶ ಇಲ್ಲದಿದ್ದರೆ ಹೇಗೆ. ಅದು ಗ್ರ್ಯಾನ್ಸ್ಲಾಮ್ಗೂ ಶೋಭೆ ತರುವುದಿಲ್ಲ’ ಎಂದು ಹೇಳಿದ್ದಾರೆ.

ಕೋವಿಡ್–19 ಬಿಕ್ಕಟ್ಟಿನ ಕಾರಣ ಈ ಬಾರಿಯ ವಿಂಬಲ್ಡನ್ ಟೂರ್ನಿಯನ್ನು ರದ್ದು ಮಾಡಲಾಗಿತ್ತು. ಆದರೆ ಫ್ರೆಂಚ್ ಓಪನ್ ಟೂರ್ನಿಯನ್ನು ಸೆಪ್ಟೆಂಬರ್ಗೆ ಮುಂದೂಡಲಾಗಿದೆ. ಒಂದೊಮ್ಮೆ ಕೊರೊನಾ ಬಿಕ್ಕಟ್ಟು ಬಗೆಹರಿಯದಿದ್ದರೆ ಟೂರ್ನಿಯನ್ನು ಖಾಲಿ ಮೈದಾನದಲ್ಲಿ ಆಯೋಜಿಸುವುದು ಅನಿವಾರ್ಯ ಎಂದು ಫ್ರೆಂಚ್ ಓಪನ್ ಸಂಘಟಕರು ತಿಳಿಸಿದ್ದಾರೆ.

ಕ್ವಿಟೋವಾ ಅವರು ವಿಂಬಲ್ಡನ್ನಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.ಮಂಗಳವಾರದಿಂದ ನಡೆಯುವ ಆಲ್ ಜೆಕ್ ಚಾರಿಟಿ ಟೆನಿಸ್ ಟೂರ್ನಿಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.