ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್ ಆಯೋಜನೆ: ಪೇಸ್ ಕಳವಳ

Last Updated 20 ಜೂನ್ 2020, 11:38 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತದ ಅನುಭವಿ ಟೆನಿಸ್‌ ಆಟಗಾರ ಲಿಯಾಂಡರ್ ಪೇಸ್ ಅವರು ಸತತ ಎಂಟನೇ ಒಲಿಂಪಿಕ್ಸ್‌ ಆಡಿ ಇತಿಹಾಸ ನಿರ್ಮಿಸುವ ಕನಸುಹೊತ್ತಿದ್ದಾರೆ. ಆ ಕನಸು ಕನಸಾಗಿಯೇ ಉಳಿಯಲಿದೆಯೇ ಎಂಬ ಸಂಶಯ ಅವರನ್ನು ಸದ್ಯ ಕಾಡುತ್ತಿದೆ.

2020 ತಮ್ಮ ಕೊನೆಯ ಟೆನಿಸ್‌ ಋತು ಎಂದು ಬುಧವಾರ ತಮ್ಮ 47ನೇ ವಸಂತಕ್ಕೆ ಕಾಲಿಟ್ಟಿರುವ ಪೇಸ್‌ ಪ್ರಕಟಿಸಿದ್ದರು. ಅಂದರೆ 2020ರಲ್ಲಿ ನಿಗದಿಯಾಗಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಬೇಕೆಂದು ಅವರ ಬಯಕೆಯಾಗಿತ್ತು. ಆದರೆ ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಈ ಕೂಟವು 2021ಕ್ಕೆ ಮುಂದೂಡಲ್ಪಟ್ಟಿದೆ.

‘ಟೋಕಿಯೊ ಒಲಿಂಪಿಕ್ಸ್‌ ಕುರಿತು ನನಗೆ ಕಳವಳವಿದೆ. ಏಕೆಂದರೆ ಇದು ನನ್ನ ಇತಿಹಾಸ ಸೃಷ್ಟಿಗೆ ಸಂಬಂಧಿಸಿದ ಕೂಟ, ನನ್ನ ಆಸ್ತಿ. ಈ ಕೂಟದ ಮೂಲಕ ನನ್ನ ಕ್ರೀಡಾ ಅಭಿಯಾನ ಕೊನೆಗೊಳಿಸಬೇಕೆಂದುಕೊಂಡಿದ್ದೆ. ಈಗ ಕೂಟ ಮುಂದೂಡಿಕೆಯಾಗಿದೆ. ವಿಶ್ವ ಆರ್ಥಿಕತೆ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಒಲಿಂಪಿಕ್ಸ್‌ನ ಪ್ರಾಯೋಜಕರು ಕೂಟಕ್ಕೆ ಹೇಗೆ ತಮ್ಮ ನೆರವು ಮುಂದುವರಿಸುತ್ತಾರೆ’ ಎಂದು ಇಂಡಿಯನ್‌ ಚೇಂಬರ್‌ ಆಫ್‌ ಕಾಮರ್ಸ್‌ ಆಯೋಜಿಸಿದ್ದ ಯಂಗ್‌ ಲೀಡರ್ಸ್‌ ಫೋರಮ್‌ ವೆಬಿನಾರ್‌ನಲ್ಲಿ ಪೇಸ್‌ ಹೇಳಿದ್ದಾರೆ.

ಕೋವಿಡ್‌–19ಕ್ಕೆ ಲಸಿಕೆ ಕಂಡುಹಿಡಿಯದೆ, 2021ರಲ್ಲೂ ಒಲಿಂಪಿಕ್ಸ್‌ ನಡೆಯುವಂತೆ ಕಾಣುತ್ತಿಲ್ಲ. ಪ್ರೇಕ್ಷಕರಿಲ್ಲದೆ ಒಲಿಂಪಿಕ್ಸ್‌ ಆಯೋಜಿಸುವಷ್ಟು ಜಪಾನ್‌ನ ಕ್ರೀಡಾ ಆಡಳಿತ ಮಂಡಳಿಗಳು ಸಮರ್ಥವಾಗಿವೆಯೇ? ಖಾಲಿ ಕ್ರೀಡಾಂಗಣದಲ್ಲಿ ನಡೆಸಿದರೆ ಅವರಿಗೆ ಆದಾಯ ಬರುವುದಾದರೂ ಹೇಗೆ’ ಎಂದು ಪೇಸ್‌ ಪ್ರಶ್ನಿಸಿದರು.

‘ಕೋವಿಡ್‌ನಿಂದ ಉಂಟಾದ ಲಾಕ್‌ಡೌನ್‌ನಿಂದಾಗಿ ನನ್ನನ್ನು ನಾನೇ ವಿಮರ್ಶಿಸಿಕೊಳ್ಳಲು ಸಾಧ್ಯವಾಯಿತು. ಹೋದ 93 ದಿನಗಳ ಕಾಲ ತಂದೆಯೊಂದಿಗೆ ಸಮಯ ಕಳೆಯಲು ಸಾಧ್ಯವಾಯಿತು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT