ಟೊರಾಂಟೊ: ಆರಂಭದ ಹಿನ್ನಡೆಯಿಂದ ಚೇತರಿಸಿಕೊಂಡ ಅಗ್ರಶ್ರೇಯಾಂಕದ ಆಟಗಾರ ಡೇನಿಯಲ್ ಮೆಡ್ವೆಡೆವ್ ಅವರು ಹುಬರ್ತ್ ಹರ್ಕಾಜ್ ಸವಾಲು ಮೀರಿ ನ್ಯಾಷನಲ್ ಬ್ಯಾಂಕ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.

ಶನಿವಾರ ನಡೆದ ಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ ಅವರು 2-6, 7-6 (6), 7-6 (5)ರಿಂದ ಏಳನೇ ಶ್ರೇಯಾಂಕದ ಹುಬರ್ತ್ ಅವರನ್ನು ಮಣಿಸಿದರು.

ವಿಶ್ವ ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನದಲ್ಲಿರುವ ರಷ್ಯಾದ 25 ವರ್ಷದ ಮೆಡ್ವೆಡೆವ್, ಈ ವರ್ಷ ಮಲ್ಲೊರ್ಕಾ ಮತ್ತು ಮಾರ್ಸೆಲಿ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ವಿಂಬಲ್ಡನ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಹುಬರ್ತ್ ಎದುರು ಎಡವಿದ್ದರು.

ಈ ಪಂದ್ಯದಲ್ಲಿ ಮೆಡ್ವೆಡೆವ್ 23 ಏಸ್ಗಳನ್ನು ಸಿಡಿಸುವ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಮೂರನೇ ಶ್ರೇಯಾಂಕದ ಸ್ಟೆಫನೊಸ್ ಸಿಟ್ಸಿಪಾಸ್ ಅವರು ಮತ್ತೊಂದು ಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ 6-1, 6-4ರಿಂದ ನಾರ್ವೆಯ ಕಾಸ್ಪರ್ ರುಡ್ ಅವರನ್ನು ಮಣಿಸಿದರು.

ಎಂಟರಘಟ್ಟದ ಮತ್ತೊಂದು ಪಂದ್ಯದಲ್ಲಿ ಅಮೆರಿಕದ ಜಾನ್ ಇಸ್ನೆರ್ 7-6 (5), 6-4ರಿಂದ ಫ್ರಾನ್ಸ್ನ ಗಾಲ್ ಮೊನ್ಫಿಲ್ಸ್ ಅವರನ್ನು ಸೋಲಿಸಿದರು.

ಸೆಮಿಗೆ ಸಬಲೆಂಕಾ

ತಮ್ಮದೇ ದೇಶದ ವಿಕ್ಟೋರಿಯಾ ಅಜರೆಂಕಾ ಅವರನ್ನು ಮಣಿಸಿದ ಬೆಲಾರಸ್ನ ಅರಿನಾ ಸಬಲೆಂಕಾ ಅವರು ಮಾಂಟ್ರಿಯಲ್ನಲ್ಲಿ ನಡೆಯುತ್ತಿರುವ ನ್ಯಾಷನಲ್ ಬ್ಯಾಂಕ್ ಓಪನ್ ಟೂರ್ನಿಯ ಸೆಮಿಫೈನಲ್ ತಲುಪಿದರು.

ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಸಬಲೆಂಕಾ 6-2, 6-4ರಿಂದ ಎದುರಾಳಿಯನ್ನು ಸೋಲಿಸಿದರು.

ಸೆಮಿಫೈನಲ್ನಲ್ಲಿ ಸಬಲೆಂಕಾ ಅವರು ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೊವಾ ಅವರನ್ನು ಎದುರಿಸುವರು. ಮತ್ತೊಂದು ಸೆಣಸಾಟದಲ್ಲಿ ಪ್ಲಿಸ್ಕೊವಾ 6-4, 6-0ರಿಂದ ಸ್ಪೇನ್ನ ಸಾರಾ ಸಾರಿಬಸ್ ಟೊರ್ಮೊ ಎದುರು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.