ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿ: ಸೆರೆನಾಗೆ ಜಯ

ಸೋಮವಾರ, ಏಪ್ರಿಲ್ 22, 2019
29 °C
ಮೂರನೇ ಸುತ್ತಿಗೆ ಜೊಕೊವಿಚ್‌, ಒಸಾಕ

ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿ: ಸೆರೆನಾಗೆ ಜಯ

Published:
Updated:
Prajavani

ಮಿಯಾಮಿ: ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಮತ್ತು ಜಪಾನ್‌ನ ನವೊಮಿ ಒಸಾಕ ಅವರು ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳಾ ಸಿಂಗಲ್ಸ್‌ ವಿಭಾಗಗಳಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ನೊವಾಕ್‌ ಎರಡನೇ ಸುತ್ತಿನಲ್ಲಿ 7–6, 6–2 ನೇರ ಸೆಟ್‌ಗಳಿಂದ ಆಸ್ಟ್ರೇಲಿಯಾದ ಬರ್ನಾರ್ಡ್‌ ಟಾಮಿಕ್‌ ಅವರನ್ನು ಮಣಿಸಿದರು.

ಟೂರ್ನಿಯಲ್ಲಿ ಆರು ಪ್ರಶಸ್ತಿ ಜಯಿಸಿರುವ ಜೊಕೊವಿಚ್‌ಗೆ ಮೊದಲ ಸೆಟ್‌ನಲ್ಲಿ ಟಾಮಿಕ್‌ ಪ್ರಬಲ ಪೈಪೋಟಿ ನೀಡಿದರು. ‘ಟೈ ಬ್ರೇಕರ್‌’ನಲ್ಲಿ ನೊವಾಕ್‌ ಮಿಂಚಿದರು.

ಎರಡನೇ ಸೆಟ್‌ನಲ್ಲಿ ಸರ್ಬಿಯಾದ ಆಟಗಾರ ಇನ್ನಷ್ಟು ಪರಿಣಾಮಕಾರಿಯಾಗಿ ಆಡಿದರು. ಎರಡು ಬಾರಿ ಎದುರಾಳಿಯ ಸರ್ವ್‌ ಮುರಿದು ಸುಲಭವಾಗಿ ಗೆಲುವಿನ ತೋರಣ ಕಟ್ಟಿದರು.

ಹಾರ್ಡ್‌ ರಾಕ್‌ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದ ಈ ಹಣಾಹಣಿ ಒಂದು ಗಂಟೆ 13 ನಿಮಿಷ ನಡೆಯಿತು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಫೆಡರಿಕೊ ಡೆಲ್‌ ಬೊನಿಸ್‌ 7–5, 3–6, 7–6ರಲ್ಲಿ ಜಾನ್‌ ಮಿಲ್‌ಮ್ಯಾನ್‌ ಎದುರೂ, ರಾಬರ್ಟೊ ಬಟಿಸ್ಟಾ 7–6, 6–4ರಲ್ಲಿ ಜಾಂಕೊ ತಿಪ್ಸರೆವಿಕ್‌ ಮೇಲೂ, ಫಾಬಿಯೊ ಫಾಗ್ನಿನಿ 5–7, 6–4, 6–4ರಲ್ಲಿ ಗುಯಿಡೊ ಆ್ಯಂಡ್ರಿಯೊಜಿ ವಿರುದ್ಧವೂ, ಕೈಲ್‌ ಎಡ್ಮಂಡ್‌ 6–3, 6–2ರಲ್ಲಿ ಇಲ್ಯಾ ಇವಾಷ್ಕಾ ಮೇಲೂ, ಅಲ್ಬರ್ಟೊ ರಾಮೊಸ್‌ 4–6, 6–4, 6–3ರಲ್ಲಿ ಲುಕಾಸ್‌ ಪೌವಿಲ್‌ ವಿರುದ್ಧವೂ, ಜಾನ್‌ ಇಸ್ನರ್‌ 7–6, 7–6ರಲ್ಲಿ ಲೊರೆಂಜೊ ಸೊನೆಗೊ ಎದುರೂ, ನಿಕ್‌ ಕಿರ್ಗಿಯೊಸ್‌ 7–5, 6–3ರಲ್ಲಿ ಅಲೆಕ್ಸಾಂಡರ್‌ ಬಬ್ಲಿಕ್‌ ಮೇಲೂ, ಜೆರೆಮಿ ಚಾರ್ಡಿ 6–4, 6–2ರಲ್ಲಿ ಗಿಲ್ಲೆಸ್‌ ಸಿಮನ್‌ ವಿರುದ್ಧವೂ ಗೆದ್ದರು.

ಮಹಿಳಾ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪೈಪೋಟಿಯಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಒಸಾಕ 6–0, 6–7, 6–1ರಲ್ಲಿ ಯಾನಿನ್‌ ವಿಕ್‌ಮೆಯರ್‌ ವಿರುದ್ಧ ವಿಜಯಿಯಾದರು.

ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ 6–3, 1–6, 6–1ರಲ್ಲಿ ರೆಬೆಕ್ಕಾ ಪೀಟರ್‌ಸನ್‌ ಅವರನ್ನು ಮಣಿಸಿದರು.

ವೀನಸ್‌ ವಿಲಿಯಮ್ಸ್‌ 7–6, 6–1ರಲ್ಲಿ ಕಾರ್ಲಾ ಸ್ವಾರೆಜ್‌ ಎದುರು ಗೆದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಸಿಮೊನಾ ಹಲೆಪ್‌ 6–1, 6–3 ನೇರ ಸೆಟ್‌ಗಳಿಂದ ಅಮೆರಿಕದ ಟೇಲರ್‌ ಟೌನ್‌ಸೆಂಡ್‌ ಅವರನ್ನು ಸೋಲಿಸಿದರು.

ಇತರ ಪಂದ್ಯಗಳಲ್ಲಿ ಕ್ಯಾರೊಲಿನಾ ವೋಜ್ನಿಯಾಕಿ 6–4, 6–4ರಲ್ಲಿ ಅಲಿಯಾಕ್ಸಾಂಡ್ರ ಸಸನೊವಿಚ್‌ ಎದುರೂ, ಏಂಜಲಿಕ್‌ ಕೆರ್ಬರ್‌ 3–6, 6–3, 6–3ರಲ್ಲಿ ಕ್ಯಾರೋಲಿನಾ ಮುಚೋವಾ ಮೇಲೂ, ಸ್ಲೋನ್‌ ಸ್ಟೀಫನ್ಸ್‌ 6–2, 6–3ರಲ್ಲಿ ಒನಸ್‌ ಜಬೆವುರ್‌ ವಿರುದ್ಧವೂ ಗೆದ್ದು ಮೂರನೇ ಸುತ್ತು ಪ್ರವೇಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !