ಶನಿವಾರ, ಜುಲೈ 31, 2021
28 °C
ಸೆರೆನಾಗೆ ಐರಿನಾ ಕೆಮಿಲಿಯಾ ಮೊದಲ ಎದುರಾಳಿ

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ನಡಾಲ್-ಜೊಕೊವಿಚ್ ಮುಖಾಮುಖಿ?

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್: ಅಗ್ರ ಕ್ರಮಾಂಕದ ನೊವಾಕ್ ಜೊಕೊವಿಚ್ ಮತ್ತು 13 ಬಾರಿಯ ಚಾಂಪಿಯನ್‌ ರಫೆಲ್ ನಡಾಲ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೂ ಮೊದಲು ಮುಖಾಮುಖಿಯಾಗುವ ಸಾಧ್ಯತೆ ಇದೆ. 

ಟೂರ್ನಿಯ ಡ್ರಾ ಗುರುವಾರ ಆಗಿದ್ದು ಪ್ರಮುಖ ಆಟಗಾರರಾದ ನಡಾಲ್‌, ಜೊಕೊವಿಚ್ ಮತ್ತು ರೋಜರ್ ಫೆಡರರ್ ಪ್ರಥಮಾರ್ಧದ ಪಟ್ಟಿಯಲ್ಲೇ ಕಾಣಿಸಿಕೊಂಡಿರುವುದರಿಂದ ಕುತೂಹಲ ಕೆರಳಿದೆ. 2016ರ ಚಾಂಪಿಯನ್ ಜೊಕೊವಿಚ್ ಮತ್ತು 2009ರ ಪ್ರಶಸ್ತಿ ವಿಜೇತ ಫೆಡರರ್ ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ. 

ನಡಾಲ್ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅಲೆಕ್ಸಿ ಪಾಪಿರಿನ್ ವಿರುದ್ಧ ಸೆಣಸುವರು. ಕ್ವಾರ್ಟರ್ ಫೈನಲ್‌ನಲ್ಲಿ ಅವರು ರಷ್ಯಾದ ಆ್ಯಂಡ್ರೆ ರುಬ್ಲೆವ್‌ ಎದುರು ಸೆಣಸಾಡುವ ಸಾಧ್ಯತೆ ಇದೆ. ಜೊಕೊವಿಚ್‌ಗೆ ಮೊದಲ ಪಂದ್ಯದಲ್ಲಿ ಅಮೆರಿಕದ ಟೆನೀಸ್ ಸ್ಯಾಂಡ್‌ಗ್ರೆನ್ ಎದುರಾಳಿ.

ಮಹಿಳಾ ವಿಭಾಗದಲ್ಲಿ 2019ರ ಚಾಂಪಿಯನ್ ಮತ್ತು ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಆ್ಯಶ್ಲಿ ಬಾರ್ಟಿ ಅಮೆರಿಕದ ಬೆರ್ನಾರ್ಡ ಪೆರ ಅವರನ್ನು ಮೊದಲ ಪಂದ್ಯದಲ್ಲಿ ಎದುರಿಸುವರು. ಎರಡನೇ ಶ್ರೇಯಾಂಕದ ನವೊಮಿ ಒಸಾಕ ರೊಮೇನಿಯಾದ ಪ್ಯಾಟ್ರಿಸಿಯಾ ಮರಿಯಾ ಟಿಗ್ ವಿರುದ್ಧ ಅಭಿಯಾನ ಆರಂಭಿಸುವರು.

ಸೆರೆನಾ ವಿಲಿಯಮ್ಸ್‌ ಮೊದಲ ಪಂದ್ಯದಲ್ಲಿ ರೊಮೇನಿಯಾದ ಐರಿನಾ ಕೆಮಿಲಿಯಾ ಬೇಗು ಅವರನ್ನು ಎದುರಿಸುವರು. ಹಾಲಿ ಚಾಂಪಿಯನ್‌ ಇಗಾ ಸ್ವಾಟೆಕ್‌ ಸ್ಲೊವೇನಿಯಾದ ಕಾಜಾ ಜುವಾನ್ ಎದುರು ಮೊದಲ ಸುತ್ತಿನಲ್ಲಿ ಸೆಣಸುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು