ಗುರುವಾರ , ಅಕ್ಟೋಬರ್ 29, 2020
20 °C

ಫ್ರೆಂಚ್ ಓಪನ್: ನಡಾಲ್ ಫೈನಲ್‌ಗೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್: ಫ್ರೆಂಚ್‌ ಓಪನ್‌ ಟೆನಿಸ್ ಟೂರ್ನಿಯಲ್ಲಿ 13ನೇ ಪ್ರಶಸ್ತಿಯ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿದಿರುವ ಸ್ಪೇನ್‌ನ ರಫೇಲ್ ನಡಾಲ್ ಶುಕ್ರವಾರ ಫೈನಲ್ ಪ್ರವೇಶಿಸಿದರು. ಪುರುಷರ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ ಅವರು ಅರ್ಜೆಂಟೀನಾದ ಡೀಗೊ ಸ್ವಾರ್ಟ್ಸ್‌ಮ್ಯಾನ್ ಎದುರು 6-3, 6-3, 7-6 (7/0)ರಲ್ಲಿ ಗೆಲುವು ಸಾಧಿಸಿದರು.

2005ರಿಂದ ಈ ಟೂರ್ನಿಯಲ್ಲಿ ಆಡುತ್ತಿರುವ ನಡಾಲ್‌ಗೆ ಇದು 99ನೇ ಗೆಲುವಾಗಿದ್ದು ಫೈನಲ್‌ನಲ್ಲಿ ಗೆದ್ದರೆ 34 ವರ್ಷದ ಈ ಆಟಗಾರ ಶತಕ ಬಾರಿಸಲಿದ್ದಾರೆ. ಆ ಮೂಲಕ ಅತಿ ಹೆಚ್ಚು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿರುವ ರೋಜರ್ ಫೆಡರರ್ ಅವರ ದಾಖಲೆಯನ್ನೂ ಸರಿಗಟ್ಟಲಿದ್ದಾರೆ. ಫೆಡರರ್ ಈ ವರೆಗೆ 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಫ್ರೆಂಚ್ ಓಪನ್‌ನ ಈ ಆವೃತ್ತಿಯಲ್ಲಿ ಒಂದು ಸೆಟ್‌ ಕೂಡ ಸೋಲದ ನಡಾಲ್ ಅವರಿಗೆ ಇದು ಪ್ರಮುಖ ಟೂರ್ನಿಯೊಂದರ 28ನೇ ಫೈನಲ್ ಆಗಿದೆ.

ಸೆಮಿಫೈನಲ್‌ನ ಮೊದಲ ಗೇಮ್‌ ರೋಚಕವಾಗಿತ್ತು. 14 ನಿಮಿಷಗಳ ಈ ಗೇಮ್‌ನಲ್ಲಿ ನಡಾಲ್ ಎರಡು ಬ್ರೇಕ್ ಪಾಯಿಂಟ್‌ಗಳನ್ನು ಗೆದ್ದುಕೊಂಡರು. ನಂತರ 2–0ಯಲ್ಲಿ ಮುನ್ನಡೆದರೂ ಎದುರಾಳಿ ಆಟಗಾರನಿಂದ ಪ್ರಬಲ ಪೈಪೋಟಿ ಕಂಡುಬಂತು. ಪಟ್ಟುಬಿಡದ ನಡಾಲ್ 65 ನಿಮಿಷಗಳಲ್ಲಿ ಮೊದಲ ಸೆಟ್‌ ತಮ್ಮದಾಗಿಸಿಕೊಂಡರು.  

ಎರಡನೇ ಸೆಟ್ ಗೆಲ್ಲಲು ಡಾಲ್‌ಗೆ ಹೆಚ್ಚು ಪ್ರಯಾಸವಾಗಲಿಲ್ಲ. ಮೂರನೇ ಸೆಟ್‌ ಟೈ ಬ್ರೇಕರ್ ವರೆಗೆ ಸಾಗಿತು. ಅಂತಿಮ ಹಂತದಲ್ಲಿ ಸ್ವಾರ್ಟ್ಸ್‌ಮ್ಯಾನ್ ಭಾರಿ ಪ್ರತಿರೋಧ ತೋರಿದರು. ಆದರೂ ನಡಾಲ್‌ಗೆ ಕಡಿವಾಣ ಹಾಕಲು ಅವರಿಗೆ ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.