ಸೋಮವಾರ, ಸೆಪ್ಟೆಂಬರ್ 20, 2021
20 °C

ಟೆನಿಸ್ ಶ್ರೇಯಾಂಕಪಟ್ಟಿ: ಅಗ್ರ 5ರಿಂದ ಹೊರಬಿದ್ದ ನಡಾಲ್, ಜೊಕೊವಿಚ್‌ಗೆ ಅಗ್ರಸ್ಥಾನ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಪ್ಯಾರಿಸ್: ವಿಶ್ವ ಟೆನಿಸ್ ಶ್ರೇಯಾಂಕಪಟ್ಟಿ (ಎಟಿಪಿ ರ್‍ಯಾಂಕಿಂಗ್ಸ್) ಸೋಮವಾರ ಪ್ರಕಟಗೊಂಡಿದ್ದು, ರಫೆಲ್ ನಡಾಲ್ ಅವರು ಅಗ್ರ ಐದರಿಂದ ಹೊರಬಿದ್ದಿದ್ದಾರೆ. ಸ್ಪೇನ್‌ನ ಭರವಸೆಯ ಯುವ ಆಟಗಾರ ಕಾರ್ಲೋಸ್ ಅಲ್ಕಾರಾಜ್ 17 ಸ್ಥಾನ ಮೇಲಕ್ಕೇರಿ 38ನೇ ಸ್ಥಾನ ಪಡೆದಿದ್ದಾರೆ.

ಫ್ರೆಂಚ್ ಓಪನ್‌ ಸೆಮಿ ಫೈನಲ್ಸ್‌ನಲ್ಲಿ ನೊವಾಕ್ ಜೊಕೊವಿಚ್ ವಿರುದ್ಧ ಸೋತ ಬಳಿಕ ಪಾದದ ಗಾಯದಿಂದಾಗಿ ನಡಾಲ್ ಯಾವುದೇ ಪಂದ್ಯ ಆಡಿರಲಿಲ್ಲ.

ಓದಿ: 

ಅಮೆರಿಕ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ರಷ್ಯಾದ ಡ್ಯಾನಿಲ್ ಮಡ್ವೆಡೆವ್ ವಿರುದ್ಧ ಸೋತರೂ ಜೊಕೊವಿಚ್ ಅವರು ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಗ್ರ್ಯಾನ್ ಸ್ಲಾಮ್ ಕಿರೀಟಕ್ಕೆ ಮುತ್ತಿಟ್ಟ ಸಂಭ್ರಮದಲ್ಲಿರುವ ಡ್ಯಾನಿಲ್ ಮಡ್ವೆಡೆವ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಆರನೇ ಸ್ಥಾನದಲ್ಲಿದ್ದ ಡೊಮಿನಿಕ್‌ ಥೀಮ್‌ ಅವರು 8ಕ್ಕೆ ಕುಸಿದಿದ್ದಾರೆ. ಮಣಿಕಟ್ಟಿನ ಗಾಯದಿಂದಾಗಿ ಅಮೆರಿಕ ಓಪನ್‌ನಲ್ಲಿ ಅವರಿಗೆ ಹಿನ್ನಡೆಯಾಗಿತ್ತು.

ಸ್ಟೆಫಾನೋಸ್ ಸಿಟ್ಸಿಪಾಸ್, ಅಲೆಕ್ಸಾಂಡರ್ ಜ್ವೆರೆವ್ ಹಾಗೂ ಆ್ಯಂಡ್ರೆ ರುಬ್ಲೆವ್ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು