ಇಟಾಲಿಯನ್ ಓಪನ್ ಟೆನಿಸ್ ಟೂರ್ನಿ: ಸೆಮಿಗೆ ನೊವಾಕ್ ಜೊಕೊವಿಚ್

ಮಂಗಳವಾರ, ಜೂನ್ 18, 2019
28 °C
ಇಟಾಲಿಯನ್ ಓಪನ್ ಟೆನಿಸ್ ಟೂರ್ನಿ: ಪ್ರಬಲ ಪೈಪೋಟಿ ನೀಡಿದ ಡೆಲ್ ಪೊಟ್ರೊ

ಇಟಾಲಿಯನ್ ಓಪನ್ ಟೆನಿಸ್ ಟೂರ್ನಿ: ಸೆಮಿಗೆ ನೊವಾಕ್ ಜೊಕೊವಿಚ್

Published:
Updated:
Prajavani

ರೋಮ್‌: ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರ ಸವಾಲನ್ನು ದಿಟ್ಟತನದಿಂದ ಮೆಟ್ಟಿ ನಿಂತ ಸರ್ಬಿಯಾದ ನೊವಾಕ್ ಜೊಕೊವಿಚ್‌ ಇಲ್ಲಿ ನಡೆಯುತ್ತಿರುವ ಇಟಾಲಿಯನ್ ಓಪನ್‌ ಟೆನಿಸ್ ಟೂರ್ನಿಯ ನಾಲ್ಕರ ಘಟ್ಟ ಪ್ರವೇಶಿಸಿದರು.

ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಒಂದನೇ ಸ್ಥಾನದಲ್ಲಿರುವ ನೊವಾಕ್‌ಗೆ ಮಾಜಿ ಅಮೆರಿಕ ಓಪನ್ ಚಾಂಪಿಯನ್‌ ಡೆಲ್ ಪೊಟ್ರೊ ಕ್ವಾರ್ಟರ್ ಫೈನಲ್ ಪಂದ್ಯದ ಆರಂಭದಿಂದಲೇ ಭಾರಿ ಪೈಪೋಟಿ ನೀಡಿದರು. ಹೀಗಾಗಿ ಪಂದ್ಯ ಪ್ರತಿ ಕ್ಷಣವೂ ರೋಚಕವಾಗಿತ್ತು.

ಮೂರು ತಾಸು ನಡೆದ ರೋಚಕ ಪಂದ್ಯದ ಮೊದಲ ಸೆಟ್‌ನಲ್ಲಿ 4–6ರ ಹಿನ್ನಡೆ ಕಂಡ ಜೊಕೊವಿಚ್ ನಂತರದ ಸೆಟ್‌ಗಳಲ್ಲಿ 7–6 (8/6), 6–4ರಲ್ಲಿ ಮೇಲುಗೈ ಸಾಧಿಸಿ ಪಂದ್ಯ ಗೆದ್ದರು.

ವಿಶ್ವ ಕ್ರಮಾಂಕದ ಒಂಬತ್ತನೇ ಸ್ಥಾನದಲ್ಲಿರುವ ಡೆಲ್‌ ಪೊಟ್ರೊ ಮೊಣಕಾಲು ನೋವಿನಿಂದಾಗ ಇಂಡಿಯಾನಾ ವೆಲ್ಸ್ ಮತ್ತು ಮಿಯಾಮಿ ಓಪನ್‌ ಟೂರ್ನಿಯಿಂದ ಹೊರಗೆ ಉಳಿದಿದ್ದರು. ಆದರೆ ಇಲ್ಲಿ ಜೊಕೊವಿಚ್‌ಗೆ ಪ್ರಬಲ ಪೈಪೋಟಿ ನೀಡಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !