ನ್ಯೂಯಾರ್ಕ್: ಸೋಲಿನ ಪ್ರಪಾತದಿಂದ ಎದ್ದು ನಿಂತ ಜೆಕ್ ಗಣರಾಜ್ಯದ ಆಟಗಾರ್ತಿ, ನಾಲ್ಕನೇ ಶ್ರೇಯಾಂಕಿತೆ ಕರೋಲಿನಾ ಪ್ಲಿಸ್ಕೋವ ಅವರು ದಾಖಲೆ ಸಂಖ್ಯೆಯ ಏಸ್ ಸಿಡಿಸಿ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತು ಪ್ರವೇಶಿಸಿದರು.
ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಅಮಾಂಡ ಅನಿಸಿಮೋವ ಎದುರು ಅವರು7-5, 6-7(5), 7-6(7) ಗೆಲುವು ಸಾಧಿಸಿದರು. 24 ಏಸ್ ಸಿಡಿಸಿ ಅವರು ಮಿಂಚಿದರು. 2019ರಲ್ಲಿ ಜೂಲಿಯಾ ಜಾರ್ಜ್ 21 ಏಸ್ ಸಿಡಿಸಿ ಅತಿ ಹೆಚ್ಚು ಏಸ್‌ಗಳ ಸಾಧನೆ ಮಾಡಿದ್ದರು.
ಮೊದಲ ಸೆಟ್‌ನಲ್ಲಿ ಪ್ಲಿಸ್ಕೋವ ಉತ್ತಮ ಆರಂಭ ಕಂಡಿದ್ದರು. ಆದರೆ ನಂತರ ತಿರುಗೇಟು ನಿಡಿದ ಎದುರಾಳಿ ಒಂದು ಹಂತದಲ್ಲಿ ಗೆಲುವಿನತ್ ಹೆಜ್ಜೆ ಹಾಕಿದ್ದರು. ಪಟ್ಟು ಬಿಡದ ಪ್ಲಿಸ್ಕೋವ ಚೇತರಿಸಿಕೊಂಡು ಗೆಲುವು ಸಾಧಿಸಿದರು. ಎರಡನೇ ಸೆಟ್‌ನಲ್ಲೂ ಜಿದ್ದಾಜಿದ್ದಿಯ ಪೈಪೋಟಿ ಕಂಡುಬಂತು. ವಿಶ್ವ ರ‍್ಯಾಂಕಿಂಗ್‌ನಲ್ಲಿ 75ನೇ ಸ್ಥಾನದಲ್ಲಿರುವ ಅನಿಸಿಮೋವ ಟೈಬ್ರೇಕರ್‌ನಲ್ಲಿ ಗೆದ್ದು ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು.
ನ್ಯೂಜರ್ಸಿಯಲ್ಲಿ ಜನಿಸಿ ಬೆಳೆದಿರುವ 20 ವರ್ಷದ ಅನಿಸಿಮೋವ ಅವರಿಗೆ ಆರ್ಥರ್ ಆ್ಯಶ್ಲಿ ಕ್ರೀಡಾಂಗಣದಲ್ಲಿ ಸ್ಥಳೀಯ ಪ್ರೇಕ್ಷಕರ ಉತ್ತಮ ಬೆಂಬಲ ಲಭಿಸಿತು. ಹೀಗಾಗಿ ನಿರ್ಣಾಯಕ ಸೆಟ್‌ನಲ್ಲಿ ಪ್ಲಿಸ್ಕೋವ ಒತ್ತಡದಲ್ಲೇ ಆಡಬೇಕಾಯಿತು. ಆದರೂ ಅವರಿಂದ ಜಯ ಕಸಿದುಕೊಳ್ಳಲು ಅನಿಸಿಮೋವಗೆ ಸಾಧ್ಯವಾಗಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.