ಬುಧವಾರ, ನವೆಂಬರ್ 25, 2020
22 °C

ಜನವರಿಯಲ್ಲಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಖಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್ (ಎಪಿ): ಮುಂದಿನ ಜನವರಿಯಲ್ಲಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯನ್ನು ನಡೆಸಲು ವಿಕ್ಟೋರಿಯನ್ ಮತ್ತು ಆಸ್ಟ್ರೇಲಿಯಾ ಸರ್ಕಾರಗಳು ಅನುಮತಿ ನೀಡುವುದನ್ನು ಕಾಯುತ್ತಿದ್ದೇವೆ ಎಂದು ಟೆನಿಸ್ ಆಸ್ಟ್ರೇಲಿಯಾ ತಿಳಿಸಿದೆ.

ಮೆಲ್ಬರ್ನ್ ಪಾರ್ಕ್‌ನಲ್ಲಿ ಜನವರಿ 18 ರಿಂದ 31ರವರೆಗೆ ಟೂರ್ನಿ ನಡೆಯಲಿದೆ.  ಆಸ್ಟ್ರೇಲಿಯಾದ ಹಲವೆಡೆ ಕೊರೊನಾ ವೈರಸ್‌ ಹಾವಳಿ ಹೆಚ್ಚುತ್ತಿರುವುದರ ನಡುವೆಯೂ ಆಯೋಜಕರು ಟೂರ್ನಿಯನ್ನು ನಡೆಸುವ ವಿಶ್ವಾಸದಲ್ಲಿದ್ದಾರೆ.

ಕ್ವಾರಂಟೈನ್ ನಿಯಮ ಪಾಲಿಸಲು  ಆಟಗಾರರು ಡಿಸೆಂಬರ್‌ ಮೂರನೇ ವಾರದಲ್ಲಿಯೇ ಆಸ್ಟ್ರೇಲಿಯಾಕ್ಕೆ ಬರಬೇಕು. ಜೊತೆಗೆ ವಿಶೇಷ ತರಬೇತಿ ತಾಣದಲ್ಲಿ ಅಭ್ಯಾಸ ನಡೆಸಬೇಕು. 

’ಕಳೆದ 24 ಗಂಟೆಗಳಲ್ಲಿ ಟೆನಿಸ್ ಆಸ್ಟ್ರೇಲಿಯಾದೊಂದಿಗೆ ಹಲವು ಸುತ್ತುಗಳ ಚರ್ಚೆ ನಡೆಸಿದ್ದೇವೆ.  ಆಟಗಾರರ ಸುರಕ್ಷತೆ ಮತ್ತು ವಸತಿ , ಪ್ರಯಾಣ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಕೆಲವು ಹೊಸ ಸವಾಲುಗಳಿವೆ. ನಾವು ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ಆಯೋಜಕರ ಜೊತೆಗೆ ಚರ್ಚೆ ನಡೆಸುತ್ತಿದ್ದೇವೆ. ಜನವರಿಯಲ್ಲಿಯೇ ಟೂರ್ನಿ ನಡೆಸುವ ಕುರಿತ ಖಚಿತ ಮಾಹಿತಿಯನ್ನು ನೀಡುತ್ತೇವೆ‘ ಎಂದು ಎಟಿಪಿ ಅಧಿಕಾರಿಗಳು ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು