ಶುಕ್ರವಾರ, ಫೆಬ್ರವರಿ 21, 2020
24 °C

ಎಬಿಎನ್‌ ಆ್ಯಮ್ರೊ ವರ್ಲ್ಡ್‌ ಟೆನಿಸ್‌ ಟೂರ್ನಿ: ಸೆಮಿಗೆ ಬೋಪಣ್ಣ–ಶಪೊವಲೋವ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರೋಟರ್‌ಡ್ಯಾಮ್‌: ಭಾರತದ ರೋಹನ್‌ ಬೋಪಣ್ಣ ಮತ್ತು ಕೆನಡಾದ ಡೆನಿಸ್‌ ಶಪೊವಲೋವ್‌ ಅವರು ಎಬಿಎನ್‌ ಆ್ಯಮ್ರೊ ವರ್ಲ್ಡ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಗುರುವಾರ ರಾತ್ರಿ ನಡೆದ ಪುರುಷರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಬೋಪಣ್ಣ ಮತ್ತು ಶಪೊವಲೋವ್‌ 6–2, 3–6, 10–7ರಲ್ಲಿ ನಾಲ್ಕನೇ ಶ್ರೇಯಾಂಕದ ಜೀನ್‌ ಜೂಲಿಯನ್‌ ರೋಜರ್‌ ಮತ್ತು ಹೋರಿಯಾ ಟೆಕಾವ್‌ಗೆ ಆಘಾತ ನೀಡಿದರು.

ಶ್ರೇಯಾಂಕ ರಹಿತ ಜೋಡಿ ಬೋಪಣ್ಣ ಮತ್ತು ಡೆನಿಸ್‌, ಮೊದಲ ಸೆಟ್‌ನಲ್ಲಿ ಅಮೋಘ ಸರ್ವ್‌ಗಳನ್ನು ಮಾಡಿತು. ಮೂರು ಬ್ರೇಕ್‌ ಪಾಯಿಂಟ್ಸ್‌ಗಳನ್ನು ಕಲೆಹಾಕಿ ಸುಲಭವಾಗಿ ಸೆಟ್‌ ಜಯಿಸಿತು.

ಎರಡನೇ ಸೆಟ್‌ನಲ್ಲಿ ರುಮೇನಿಯಾದ ಟೆಕಾವ್‌ ಮತ್ತು ನೆದರ್ಲೆಂಡ್ಸ್‌ನ ರೋಜರ್‌ ತಿರುಗೇಟು ನೀಡಿ 1–1 ಸಮಬಲ ಸಾಧಿಸಿದರು.

‘ಟೈ’ ಬ್ರೇಕರ್‌ನಲ್ಲಿ ಎರಡೂ ಜೋಡಿಗಳು ಜಿದ್ದಾಜಿದ್ದಿನಿಂದ ಸೆಣಸಿದವು. ಆಕರ್ಷಕ ಡ್ರಾಪ್‌ ಮತ್ತು ಬೇಸ್‌ಲೈನ್‌ ಸ್ಮ್ಯಾಷ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿದ ಬೋಪಣ್ಣ ಮತ್ತು ಶಪೊವಲೋವ್‌ ಪಂದ್ಯ ಗೆದ್ದು ಸಂಭ್ರಮಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು