ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ರೋಹನ್‌– ಎಬ್ಡೆನ್‌

Published 27 ಮಾರ್ಚ್ 2024, 23:52 IST
Last Updated 27 ಮಾರ್ಚ್ 2024, 23:52 IST
ಅಕ್ಷರ ಗಾತ್ರ

ಮಯಾಮಿ ಗಾರ್ಡನ್ಸ್, ಅಮೆರಿಕ : ಭಾರತದ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರು ಮಯಾಮಿ ಓಪನ್ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್‌ಗೆ ಮುನ್ನಡೆದರು.

ಅಗ್ರ ಶ್ರೇಯಾಂಕದ ರೋಹನ್‌– ಎಬ್ಡೆನ್ ಜೋಡಿ ಮಂಗಳವಾರ ರಾತ್ರಿ ನಡೆದ ಎಂಟರ ಘಟ್ಟದ ಹಣಾಹಣಿ ಯಲ್ಲಿ 3-6, 7-6(4), 10-7ರಿಂದ ಡಚ್‌ನ ಸೆಮ್ ವರ್ಬೀಕ್ ಮತ್ತು ಆಸ್ಟ್ರೇಲಿಯಾದ ಜಾನ್-ಪ್ಯಾಟ್ರಿಕ್ ಸ್ಮಿತ್ ಅವರನ್ನು ಮೂರು ಸೆಟ್‌ ಹೋರಾಟದಲ್ಲಿ ಹಿಮ್ಮೆಟ್ಟಿಸಿತು.

ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ 44 ವರ್ಷದ ರೋಹನ್‌– ಎಬ್ಡೆನ್‌ ಅವರು ಮೊದಲ ಸೆಟ್‌ನಲ್ಲಿ ಅನಗತ್ಯ ತಪ್ಪುಗಳನ್ನು ಎಸಗಿದ್ದರಿಂದ ಹಿನ್ನಡೆ ಅನುಭವಿಸಿದರು. ಆದರೆ ಎರಡನೇ ಸೆಟ್‌ನಲ್ಲಿ ಪುಟಿದೆದ್ದು ವೇಗದ ಸರ್ವ್‌, ನಿಖರ ರಿಟರ್ನ್‌ಗಳ ಮೂಲಕ ತಿರುಗೇಟು ನೀಡಿದರು. ಟೈ ಬ್ರೇಕರ್‌ನಲ್ಲಿ ಮೇಲುಗೈ ಸಾಧಿಸಿದ ಅವರು, ನಿರ್ಣಾಯಕ ಸೆಟ್‌ನಲ್ಲೂ ಪಾರಮ್ಯ ಮೆರೆದರು.

ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಕನ್ನಡಿಗ ರೋಹನ್‌, ಈ ಗೆಲುವಿನ ಮೂಲಕ ಅಗ್ರ 10ರೊಳಗೆ ಸ್ಥಾನವನ್ನು ಬಲಪಡಿಸಿದ್ದಾರೆ. ಇದು ಅವರಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಲು ನೆರವಾಗಲಿದೆ.  ರೋಹನ್‌– ಎಬ್ಡೆನ್‌ ಅವರು ಮುಂದಿನ ಸುತ್ತಿನಲ್ಲಿ ಮಾರ್ಸೆಲ್ ಗ್ರಾನೊಲ್ಲರ್ಸ್ (ಸ್ಪೇನ್)– ಹೊರಾಸಿಯೊ ಜೆಬಾಲ್ಲೋಸ್ (ಅರ್ಜೆಂಟಿನಾ) ಮತ್ತು ಲಾಯ್ಡ್ ಗ್ಲಾಸ್ಪೂಲ್ (ಅಮೆರಿಕ)– ಜೀನ್ ಜೂಲಿಯನ್ ರೋಜರ್ (ನೆದರ್ಲೆಂಡ್ಸ್‌) ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT