ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿನಾ ಸಬಲೆಂಕಾ ಶುಭಾರಂಭ

ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿ
Published 28 ಮೇ 2023, 21:44 IST
Last Updated 28 ಮೇ 2023, 21:44 IST
ಅಕ್ಷರ ಗಾತ್ರ

ಪ್ಯಾರಿಸ್‌: ಸುಲಭ ಜಯ ಸಂಪಾದಿಸಿದ ಬೆಲಾರೂಸ್‌ನ ಅರಿನಾ ಸಬಲೆಂಕಾ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿಗೆ ಮುನ್ನಡೆದರು.

ರೋಲ್ಯಾಂಡ್‌ ಗ್ಯಾರೊಸ್‌ನಲ್ಲಿ ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅರಿನಾ 6-3, 6-2ರಿಂದ ಮಾರ್ಟಾ ಅವರನ್ನು ಪರಾಭವಗೊಳಿಸಿದರು.

ಪಂದ್ಯ ಮುಗಿದ ಬಳಿಕ ಉಕ್ರೇನ್‌ನ ಮಾರ್ಟಾ ಕೊಸ್ತಿಯುಕ್‌ ಅವರು ಅರಿನಾ ಅವರ ಕೈಕುಲುಕಲು ನಿರಾಕರಿಸಿ ಅಪಹಾಸ್ಯಕ್ಕೊಳಗಾದರು. ರಷ್ಯಾ ಮತ್ತು ಉಕ್ರೇನ್‌ ನಡುವಣ ರಾಜಕೀಯ ಸಂಘರ್ಷದ ಕರಿನೆರಳು ಕ್ರೀಡೆಯನ್ನು ಇನ್ನೂ ಬಾಧಿಸುತ್ತಿದೆ ಎಂಬುದಕ್ಕೆ ಈ ಪ್ರಸಂಗ ಸಾಕ್ಷಿಯಾಯಿತು.

ಪಂದ್ಯದ ಕೊನೆಯ 12 ಗೇಮ್‌ಗಳಲ್ಲಿ 10ನ್ನು ತನ್ನದಾಗಿಸಿಕೊಂಡ ಅರಿನಾ, ಉಕ್ರೇನ್ ಆಟಗಾರ್ತಿಯನ್ನು ಸುಲಭವಾಗಿ ಸೋಲಿಸಿದರು. ಪಂದ್ಯ ಕೊನೆಗೊಂಡ ತಕ್ಷಣವೇ ಮಾರ್ಟಾ ಅವರು ಅರಿನಾ ಅವರನ್ನು ಅಭಿನಂದಿಸದೇ ತಮಗೆ ಮೀಸಲಿದ್ದ ಖುರ್ಚಿಯತ್ತ ತೆರಳಿದರು.

ಮಹಿಳೆಯರ ಸಿಂಗಲ್ಸ್ ವಿಭಾಗದ ಇನ್ನುಳಿದ ಪಂದ್ಯಗಳಲ್ಲಿ ಅರ್ಜೆಂಟೀನಾದ ನಾದಿಯಾ ಪೊದೊರೊಸ್ಕಾ 6-0, 6-2ರಿಂದ ಫ್ರಾನ್ಸ್‌ನ ಜೆಸ್ಸಿಕಾ ಪೊಂಚೆಸ್‌ ಎದುರು, ಆಸ್ಟ್ರೇಲಿಯಾದ ಸ್ಟಾರ್ಮ್‌ ಸ್ಯಾಂಡರ್ಸ್ 4-6, 6-2, 6-4ರಿಂದ ಸ್ಪೇನ್‌ನ ನೂರಿಯಾ ಪೆರಿಜಾಸ್‌ ಡಿಯಾಜ್ ವಿರುದ್ಧ, ಪೋಲೆಂಡ್‌ನ ಮ್ಯಾಗ್ದಾಲೆನಾ 6-1, 6-1ರಿಂದ ಚೀನಾದ ಜಾಂಗ್ ಶುಯಿ ಎದುರು ಮುನ್ನಡೆದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಆಸ್ಟ್ರಿಯಾದ ಸೆಬಾಸ್ಟಿಯನ್ ಆಫ್ನರ್ 6-4, 7-6, (8/6)ರಿಂದ ಅಮೆರಿಕದ ಮ್ಯಾಕ್ಸಿಮ್ ಕ್ರೆಸ್ಸಿ ವಿರುದ್ಧ ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT