ಲಂಡನ್: ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಬೆಥನಿ ಮಟೆಕ್ ಸ್ಯಾಂಡ್ಸ್ ಜೋಡಿ ಇಲ್ಲಿ ಸಾಗುತ್ತಿರುವ ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಮಹಿಳಾ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಸಾನಿಯಾ-ಬೆಥನಿ ಜೋಡಿಯು ಆರನೇ ಶ್ರೇಯಾಂಕಿತೆ ಅಮೆರಿಕ-ಚಿಲಿ ಜೋಡಿ ದೇಸಿರೆ ಕ್ರಾವ್ಜಿಕ್ ಮತ್ತು ಅಲೆಕ್ಸ ಗುರಾಚಿ ವಿರುದ್ಧ 7-5, 6-3ರ ಕಠಿಣ ಅಂತರದ ಗೆಲುವು ದಾಖಲಿಸಿ ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ.

ಇದನ್ನೂ ಓದಿ:PV Web Exclusive: ನೋವು ಹೊತ್ತು ನಲಿವ ನೋಡಿದ ಸೆರೆನಾ

ಒಂದು ತಾಸು 27 ನಿಮಿಷಗಳ ವರಗೆ ಸಾಗಿದ ಜಿದ್ದಾಜಿದ್ದಿನ ಹೋರಾಟದ ಅಂತ್ಯದಲ್ಲಿ ಸಾನಿಯಾ-ಬೆಥನಿ ಜೋಡಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದಾರೆ.

2015ರಲ್ಲಿ ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಸಾನಿಯಾ ಮಿರ್ಜಾ ವಿಂಬಲ್ಡನ್ ಮಹಿಳಾ ಡಬಲ್ಸ್ ಕಿರೀಟವನ್ನು ಎತ್ತಿ ಹಿಡಿದಿದ್ದರು. ಮಾರ್ಟಿನಾ ಜೊತೆ ಸೇರಿ ಅದೇ ಸಾಲಿನಲ್ಲಿ ಅಮೆರಿಕನ್ ಓಪನ್ ಮತ್ತು 2016ರಲ್ಲಿ ಆಸ್ಟ್ರೇಲಿಯನ್ ಓಪನ್ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು.

2005ನೇ ಇಸವಿಯಿಂದಲೂ ಸಾನಿಯಾ ಮಿರ್ಜಾ ಪ್ರಮುಖ ಟೂರ್ನಿಗಳಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.