ಶನಿವಾರ, ಫೆಬ್ರವರಿ 22, 2020
19 °C

ಹೋಬರ್ಟ್‌ ಅಂತರಾಷ್ಟ್ರೀಯ ಟೆನಿಸ್‌: ಫೈನಲ್‌ಗೆ ಸಾನಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೋಬರ್ಟ್‌ : ಭಾರತದ ಸಾನಿಯಾ ಮಿರ್ಜಾ ಹೋಬರ್ಟ್ ಅಂತ ರಾಷ್ಟ್ರೀಯ ಟೆನಿಸ್‌ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಫೈನಲ್‌ ತಲುಪಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಸೆಮಿ ಫೈನಲ್‌ನಲ್ಲಿ ಸಾನಿಯಾ ಹಾಗೂ ಉಕ್ರೇನ್‌ನ ನಾದಿಯಾ ಕಿಚೆನೊಕ್‌, ಸ್ಲೋವೆನಿಯಾ–ಜೆಕ್‌ ಗಣರಾಜ್ಯದ ಜೋಡಿ ತಮರಾ ಜಿಡಾನ್ಸೆಕ್‌–ಮರಿಯಾ ಬೌಜ್‌ಕೊವಾ ಅವರನ್ನು 7–6, 6–2 ಯಿಂದ ಮಣಿಸಿದರು. ಒಂದು ತಾಸು 24 ನಿಮಿಷಗಳಲ್ಲಿ ಪಂದ್ಯ ಮುಗಿಯಿತು.

ಮೊದಲ ಸೆಟ್‌ ಭಾರೀ ಪೈಪೋಟಿ ಯಿಂದ ಕೂಡಿತ್ತು. 6–6 ಸಮಬಲ ಕಂಡ ಈ ಸೆಟ್‌ ಟೈಬ್ರೇಕ್‌ವರೆಗೆ ಸಾಗಿತು. ಇಲ್ಲಿ ಸೊಗಸಾದ ಆಟದ ಮೂಲಕ ಪಾಯಿಂಟ್‌ ಕಲೆಹಾಕಿ ಮುನ್ನಡೆ ಪಡೆಯುವಲ್ಲಿ ಸಾನಿಯಾ–ಕಿಚೆನೊಕ್‌ ಯಶಸ್ವಿಯಾದರು.

ಎರಡನೇ ಸೆಟ್‌ನ  ಮೂರು ಗೇಮ್‌ ಗಳಲ್ಲಿ ಎದುರಾಳಿಗಳ ಸರ್ವ್‌ ಮುರಿದ ಸಾನಿಯಾ ಮತ್ತು ನಾದಿಯಾ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು