ಭಾನುವಾರ, ಜನವರಿ 19, 2020
24 °C

ಅಕ್ಲೆಂಡ್ ಕ್ಲಾಸಿಕ್ ಟೆನಿಸ್‌ ಟೂರ್ನಿ: ಸರೇನಾ ವಿಲಿಯಮ್ಸ್‌ಗೆ ಸುಲಭ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಲೆಂಡ್: ಅಕ್ಲೆಂಡ್ ಕ್ಲಾಸಿಕ್ ಸಿಂಗಲ್ಸ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಇಟಲಿಯ ಕಾಮಿಲಾ ಗಿಯೋರ್ಗಿ ಅವರನ್ನು ಮಣಿಸಿದ ಅನುಭವಿ ಆಟಗಾರ್ತಿ ಸೆರೇನಾ ವಿಲಿಯಮ್ಸ್, ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.

ಪಂದ್ಯದಲ್ಲಿ ಗಿಯೋರ್ಗಿಯ ಸರ್ವ್‌ ಅನ್ನು ಮೂರು ಬಾರಿ ಮುರಿದ 38 ವಯಸ್ಸಿನ ಸೆರೇನಾ, ಎಂಟು ಏಸ್‌ ಸಿಡಿಸಿದರು. ಅವರು ಈ ಪಂದ್ಯವನ್ನು 6–3, 6–2 ಅಂತರದಿಂದ ಗೆದ್ದುಕೊಂಡರು.

ಪಂದ್ಯದ ಬಳಿಕ ಮಾತನಾಡಿದ ಸೆರೇನಾ, ‘ನನ್ನ ತೋಳುಗಳು ಮತ್ತು ಕಾಲುಗಳಲ್ಲಿ ಇನ್ನೂ ಬಲವಿದೆ ಎಂಬುದನ್ನು ತಿಳಿಯಲು ಇದರಿಂದ ಸಾಧ್ಯವಾಯಿತು’ ಎಂದು ಹೇಳಿದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಅಮೆರಿಕ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ಕೆನಡಾದ ಬಿಯಾಂಕಾ ಅಂಡ್ರೆಸ್ಕ್ಯೂ ಎದುರು ಸೋಲು ಕಂಡಿದ್ದ ಸೆರೇನಾ ಆ ಬಳಿಕ ಕಣಕ್ಕಿಳಿದಿರಲಿಲ್ಲ.

ಇದನ್ನೂ ಓದಿ: ಬಿಯಾಂಕ ಅಮೆರಿಕ ಓಪನ್ ಕಿರೀಟದ ಹೊಸ ಒಡತಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು