ಮಂಗಳವಾರ, ಜೂನ್ 22, 2021
22 °C

ಸಾವಿರ ಪಂದ್ಯಗಳ ಮೈಲುಗಲ್ಲು: ಸೆರೆನಾಗೆ ಸೋಲು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ರೋಮ್: ಡಬ್ಲ್ಯುಟಿಎ ಟೂರ್‌ ಇತಿಹಾಸದಲ್ಲಿ ಒಂದು ಸಾವಿರ ಪಂದ್ಯ ಆಡಿ ಅಮೆರಿಕದ ಸೆರೆನಾ ವಿಲಿಯಮ್ಸ್‌ ಬುಧವಾರ ಹೊಸ ಮೈಲುಗಲ್ಲು ಸ್ಥಾಪಿಸಿದರು. ಆದರೆ ಈ ಪಂದ್ಯದಲ್ಲಿ ಸೋಲುವುದರೊಂದಿಗೆ ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯಿಂದ ಹೊರಬಿದ್ದರು.

ಈ ತಿಂಗಳ 30ರಂದು ಆರಂಭಗೊಳ್ಳಲಿರುವ ಫ್ರೆಂಚ್ ಓಪನ್ ಟೂರ್ನಿಗೆ ಸಜ್ಜಾಗುತ್ತಿರುವ ಸೆರೆನಾ ಅವರು ಇಟಾಲಿಯನ್‌ ಓಪನ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನಾದ ನಾದಿಯಾ ಪೊಡೊರೊಸ್ಕಾ ಅವರಿಗೆ 6–7 (6/8), 5-7ರಲ್ಲಿ ಮಣಿದರು.

ಈ ವರೆಗೆ 73 ಡಬ್ಲ್ಯುಟಿಎ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಸೆರೆನಾ ಇಟಾಲಿಯನ್ ಓಪನ್‌ನಲ್ಲಿ ನಾಲ್ಕು ಬಾರಿ ಚಾಂಪಿಯನ್‌ ಆಗಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಜಪಾನ್‌ನ ನವೊಮಿ ಒಸಾಕ ಎದುರು ಸೋತ ನಂತರ ಅವರು ಕಣಕ್ಕೆ ಇಳಿದ ಮೊದಲ ಟೂರ್ನಿ ಇದು. ಡಬ್ಲ್ಯುಟಿಎಯಲ್ಲಿ ಸೆರೆನಾ ಈ ವರೆಗೆ ಒಟ್ಟು 851 ಪಂದ್ಯಗಳನ್ನು ಗೆದ್ದುಕೊಂಡಿದ್ದು 149ರಲ್ಲಿ ಸೋತಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ ಕಜಕಸ್ತಾನದ ಯರೊಸ್ಲಾವ ಶ್ವೆಡೊವ ಎದುರು 6-4, 6-1ರಲ್ಲಿ ಜಯ ಗಳಿಸಿ ಮೂರನೇ ಸುತ್ತು ಪ್ರವೇಶಿಸಿದರು. ಎರಡನೇ ಶ್ರೇಯಾಂಕದ ಆಟಗಾರ್ತಿ ಜಪಾನ್‌ನ ನವೊಮಿ ಒಸಾಕ 6-7 (2/7), 2-6ರಲ್ಲಿ ಅಮೆರಿಕದ ಜೆಸಿಕಾ ಪೆಗುಲಾ ಅವರಿಗೆ ಮಣಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು