ಭಾನುವಾರ, ಫೆಬ್ರವರಿ 28, 2021
20 °C

ಮ್ಯಾಚ್ ಫಿಕ್ಸಿಂಗ್: ಟೆನಿಸ್ ಅಟಗಾರನಿಗೆ ನಿಷೇಧ

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡ ಆರೋಪದಲ್ಲಿ ಸ್ಲೋವಾಕಿಯಾ ಮೂಲದ ಟೆನಿಸ್ ಆಟಗಾರ ಡೆಗಮಾರಾ ಬೆಸ್ಕೋವಾ ಅವರಿಗೆ 12 ವರ್ಷಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ.

 2017ರಲ್ಲಿ ಅವರು ಮ್ಯಾಚ್‌ ಫಿಕ್ಸಿಂಗ್‌ನ ಐದು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಆದ್ದರಿಂದ ಅವರಿಗೆ ಈ ನಿಷೇಧ ಶಿಕ್ಷೆಯ ಜೊತೆಗೆ ₹ 25 ಲಕ್ಷ ದಂಡವನ್ನೂ ವಿಧಿಸಲಾಗಿದೆ ಎಂದು ಟೆನಿಸ್ ಇಂಟಿಗ್ರಿಟಿ ಯೂನಿಟ್ ತಿಳಿಸಿದೆ.

ಬೆಸ್ಕೋವಾ ಮಹಿಳೆಯರ ಟೆನಿಸ್‌ ಸಿಂಗಲ್ಸ್‌ ರ‍್ಯಾಂಕಿಂಗ್‌ನಲ್ಲಿ 1117 ಮತ್ತು ಡಬಲ್ಸ್‌ನಲ್ಲಿ 777 ನೇ ಶ್ರೇಯಾಂಕ ಹೊಂದಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.